ಮುನ್ನೂರು ರೆಡ್ಡಿ ವಧು ವರರ ಸಮಾವೇಶ 19ರಂದು

aa82e420-3728-425f-bbdb-e6203936fd0c
Published on

ಕಲಬುರಗಿ: ಮುನ್ನೂರು ರೆಡ್ಡಿ ಸಮಾಜದ ಪ್ರಥಮ ವಧು ವರರ ಸಮಾವೇಶವನ್ನು ನಗರದ ಸಾಯಿ ಬಾಬಾ ಮಂದಿರದ ಸಭಾ ಭವನದಲ್ಲಿ ಮೇ ೧೯ರಂದು ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮುನ್ನೂರು ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ವಾಸುದೇವ ಪಾಟೀಲ್ ತಿಳಿಸಿದರು. ಹರಿದು ಹಂಚಿ ಹೋಗಿರುವ ಸಮಾಜವನ್ನು ಸಂಘಟಿಸುವುದು, ವಧು ವರರಿಗೆ ಸೂಕ್ತ ವೇದಿಕೆ ಒದಗಿಸಲು ಸಮಾವೇಶ ಹಮ್ಮಿಕೊಂಡಿದ್ದು, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ತೆಲಂಗಾಣ, ಮಹಾರಾಷ್ಟçದ ವಧು ವರರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾವೇಶದ ಮೂಲಕ ಮುನ್ನೂರು, ಮುನ್ನೂರು ಕಾಪು, ಉಪ್ಪಾರ ರೆಡ್ಡಿ, ತುಳೇರು, ಮುನ್ನೇರುವಾಲು ಎಂದು ಕರೆಯಲ್ಪಡುವ ಇಡೀ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಗುವಿವಿ ಹಿಂದಿ ವಿಭಾಗದ ಪರಿಮಳಾ ಅಂಬೇಕರ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಮಾಜಿ ಶಾಸಕ ಪಾಪರೆಡ್ಡಿ, ರಾಯಚೂರದ ಬೆಲಂ ನರಸರೆಡ್ಡಿ, ಸೊಲ್ಲಾಪುರದ ಲಕ್ಷö್ಮಣರಾವ ಗಾದೆ ಸೇರಿ ಸಮಾಜದ ವಿವಿಧೆಡೆಯ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಪ್ರಮುಖರಾದ ಸೀತಾರಾಮ ಮುನ್ನೂರು, ಶಂಕರರಾವ ರೆಡ್ಡಿ, ಸಂಜೀವರೆಡ್ಡಿ, ಚಂದ್ರಕಾAತ ವೈಜಾಪುರ, ದತ್ತಾತ್ರೇಯ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net