

ಕಲಬುರಗಿ: ಕಮಲಾಪುರ ತಾಲೂಕಿನ ಮುದ್ದಡಗಾದಲ್ಲಿ ಶ್ರೀ ಸಂಗಮೇಶ್ವರರ ೪೩ನೇ ಜಾತ್ರೋತ್ಸವ ನಿಮಿತ್ತ ಮೇ ೧ರಂದು ಸಂಜೆ ೫ಕ್ಕೆ ರಥೋತ್ಸವ ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸದ್ಯೋಜಾತ ರೇಣುಕ ಶಿವಾಚರ‍್ಯರು ಹೇಳಿದರು. ಏ.೨೯ರಿಂದ ವಿವಿಧ ಧರ‍್ಮಿಕ ಕರ‍್ಯಕ್ರಮ ನಡೆಯಲಿದ್ದು, ಶ್ರೀಗಳಿಗೆ ತುಲಾಭಾರ, ಅಯ್ಯಾಚಾರ ಮತ್ತು ಶಿವದೀಕ್ಷೆ ಕರ‍್ಯಕ್ರಮ ಮೇ ೨ರಂದು ಬೆಳಗ್ಗೆ ೮ಕ್ಕೆ ನಡೆಯಲಿದೆ. ಜಾತ್ರೆ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಪುರಾಣ ಪ್ರವಚನ ಶುರುವಾಗಿದ್ದು, ಮೇ ೧ರಂದು ಮಹಾ ಮಂಗಲಗೊಳ್ಳಲಿದೆ. ಏ.೩೦ರಂದು ರ‍್ಮಸಭೆ ಜರುಗಲಿದ್ದು, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡ ರ‍್ಷಾನಂದ ಗುತ್ತೇದಾರ್, ಕಲಬುರಗಿ ಗ್ರಾಮೀಣ ಮಂಡಲ ಬಿಜೆಪಿ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್, ಸಂಗಮೇಶ, ಸಿದ್ದಣ್ಣಗೌಡ ಪಾಟೀಲ್, ಸತೀಶ ಸೊರಡೆ, ರಾಮರತನ್ ಪಾಟೀಲ್, ಮಲ್ಲು ಪೂಜಾರಿ, ವಿಜಯಕುಮಾರ ಪಾಟೀಲ್ ಮುಖ್ಯ ಅತಿಥಿಗಳಾಗಿದ್ದಾರೆ. ಮೇ ೧ರಂದು ಬೆಳಗ್ಗೆ ೯ಕ್ಕೆ ಪಲ್ಲಕ್ಕಿ ಉತ್ಸವ, ಕಳಸ ನಂದಿಕೋಲ, ಕುಂಭ ಮೆರವಣಿಗೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿವಲಿಂಗಯ್ಯ ಸ್ವಾಮಿ ಮಠಪತಿ, ರೇವಣಸಿದ್ದಪ್ಪ ಧನ್ನೂರ್, ಅಂಬಾರಾಯ, ಸುಭಾಷ, ರೇವಣಸಿದ್ದಪ್ಪ ಇತರರಿದ್ದರು.