ಮುಕ್ತಮಂದಿರದಲ್ಲಿ ಪಂಚಾಚಾರ್ಯರ ಸಭೆ ಮೇ 7ರಂದು

Rambapuri 4 March 20
Published on

ಕಲಬುರಗಿ: ಮುಂಬರುವ ಜನಗಣತಿ, ಜಾತಿಗಣತಿ ಸಂರ‍್ಭದಲ್ಲಿ ಪಂಚ ಪೀಠಗಳ ನಿಲುವು ಸ್ಪಷ್ಟಪಡಿಸುವ ಉದ್ದೇಶದಿಂದ ಬುಧವಾರ ಸಂಜೆ ೭ಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಪಂಚ ಪೀಠಾಧೀಶರ ಸಭೆ ನಡೆಯಲಿದೆ. ಮಹತ್ವದ ಮೀಟಿಂಗ್​ನಲ್ಲಿ ಪಾಲ್ಗೊಳ್ಳುವಂತೆ ಉಜ್ಜಯಿನಿ, ಕೇದಾರ, ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳನ್ನು ಕೋರಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಜನಗಣತಿ, ಜಾತಿಗಣತಿ ಸಂದಿಗ್ಧ ಪ್ರಸಂಗದಲ್ಲಿ ಪೀಠಗಳು ಒಕ್ಕೂಟ ವ್ಯವಸ್ಥೆಗೆ ಮುಂದಾಗಬೇಕು ಎಂದು ಅಪೇಕ್ಷೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮತ್ತು ಪೀಠಾಭಿಮಾನಿಗಳ, ಭಕ್ತರ ಒತ್ತಾಸೆ ಮೇರೆಗೆ ಈ ಸಭೆ ಕರೆಯಲಾಗಿದೆ. ಆಂತರಿಕ ಸಮಸ್ಯೆಗಳಿಗೆ ತರ‍್ಕಿಕ ಅಂತ್ಯಗೊಳಿಸುವ ವಿಚಾರ ಸಭೆಯಲ್ಲಿ ರ‍್ಚೆಯಾಗಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net