

ಶಿರಸಿ: ತಾಲೂಕಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜಿರೆಯಲ್ಲಿರುವ ಮುಂಡಿಗೆಕೆರೆಗೆ ಪಕ್ಷಿಗಳು ಬರಲಾರಂಭಿಸಿವೆ.
ಈ ವರ್ಷ ಮೇ 24ರಂದು ಬೆಳ್ಳಕ್ಕಿಗಳು ಕೆರೆ ಸುತ್ತ ಹಾರಾಡಿದ್ದವು. ಜೂನ್ 2ರಂದು ಅಂದಾಜು 75 ಬೆಳ್ಳಕ್ಕಿಗಳು ಕೆರೆಗೆ ಇಳಿದಿದ್ದವು. ಆದರೆ, ರಾತ್ರಿ ವಾಸ್ತವ್ಯ ಮಾಡದೇ ಹಾರಿ ಹೋಗಿದ್ದವು. ಬೆಳ್ಳಕ್ಕಿಗಳು ಕೆರೆಗೆ ಇಳಿದು ಪೂರ್ಣ ಪ್ರಮಾಣ ದಲ್ಲಿ ಅಲ್ಲಿ ವಾಸ್ತವ್ಯ ಆರಂಭಿಸಿದರೆ, 5-6 ದಿನಗಳಲ್ಲಿ ಮಳೆ ಪ್ರಾರಂಭವಾಗುತ್ತದೆ ಎಂಬುದು ಎರಡೂ ವರೆ ದಶಕಗಳಲ್ಲಿ ಗಮನಿಸಿರುವ ಸಂಗತಿ ಎಂದು ಜಾಗೃತ ವೇದಿಕೆಯ ಪ್ರಮುಖ ರತ್ನಾಕರ ಹೆಗಡೆ ಬಾಡಲಕೊಪ್ಪ ತಿಳಿಸಿದ್ದಾರೆ.
ಗ್ರಾಪಂ ಜೀವವೈವಿಧ್ಯ ಕಾನೂನಿ ನಲ್ಲಿ ಪಕ್ಷಿಗಳ ಸಂತಾನೋತ್ಪತ್ತಿ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೊಷಿಸಿರುವುದು ಪ್ರಥಮ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.