

ಕಲಬುರಗಿ: ಬೆಂಗಳೂರಿನಲ್ಲಿ ಆ.೩೦ರಂದು ನಡೆಯಲಿರುವ ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್ ಸ್ಪರ್ಧೆಗೆ ಜಿಲ್ಲಾ ಜೂಡೋ ತಂಡವನ್ನು ಆಯ್ಕೆ ಮಾಡಲಾಯಿತು. ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ೧೪ ವರ್ಷದ ಬಾಲಕರಾದ ಸಂಜಯ ಶುಕ್ಲಾ, ವಾಟ್‌ಸಿನ್, ಸಿದ್ದಿ ವಿನಾಯಕ, ಪ್ರದುಂ, ರಾಕೇಶ, ಮುಬಾಶೇರ, ಧ್ಯಾನ್ರಾಜ್, ಹ್ಯಾಪಿರಾಜ, ಅಕ್ಷಯ ಅವರನ್ನು ಆಯ್ಕೆ ಮಾಡಲಾಯಿತು. ಜೂಡೋ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶಿವಂ ಜೋಶಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಜೂಡೋ ತರಬೇತಿದಾರ ಅಶೋಕ ಎಂ., ಬಾಸ್ಕೆಟ್ ಬಾಲ್ ತರಬೇತಿದಾರ ಪ್ರವೀಣ ಪುಣೆ ಇತರರಿದ್ದರು.