

ಕಲಬುರಗಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕೋಹಿನೂರ ಡಿಗ್ರಿ ಕಾಲೇಜು ಸಹಯೋಗದಡಿ ಆ.೧೭ರಂದು ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೨ರವರೆಗೆ ಹೈಕೋರ್ಟ್ ರಸ್ತೆಯ ಕೋಹಿನೂರ ಪದವಿ ಕಾಲೇಜಿನಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಇಜಿ ವೇದಲ್ಲಿ ಇಸಿಎ (ಅಕೌಂಟ್ಸ್) ಹಾಗೂ ಇಸಿಎ (ಮಾರ್ಕೆಟಿಂಗ್) ಹುದ್ದೆಗಳಿಗೆ ಬಿಕಾಂ, ಬಿಬಿಎ, ಎಂಬಿಎ, ಎಂಕಾA ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ಕಲಬುರಗಿ ಎಸ್‌ಬಿಐ ಲೈಫ್ ಇನ್ಶೂರೆನ್ಸ್ನಲ್ಲಿ ಅಭಿವೃದ್ಧಿ ವ್ಯವಸ್ಥಾಪಕ ಹುದ್ದೆಗೆ ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರಬೇಕು. ಹೊಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾದಲ್ಲಿ ಟೆಕ್ನಿಷಿಯನ್ ಹುದ್ದೆಗೆ ಎಸ್ಸೆಸ್ಸೆಲ್ಸಿ /ಪಿಯುಸಿ ಪಾಸಾಗಿರಬೇಕು. ರಿಲಾಯನ್ಸ್ ಜಿಯೋದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪದವಿ/ಎಂಬಿಎ ಪಾಸಾಗಿರಬೇಕು.
ಸ್ವತಂತ್ರ ಮೈಕ್ರೋ ಫೈನಾನ್ಸ್ನಲ್ಲಿ ಫೀಲ್ಡ್ ಆಫೀಸರ್, ಸೀನಿಯರ್ ಫೀಲ್ಡ್ ಆಫೀಸರ್, ಶಾಖಾ ವ್ಯವಸ್ಥಾಪಕ, ಏರಿಯಾ ಬ್ರಾÈಂಚ್ ಮ್ಯಾನೇಜರ್, ರಿಸ್ಕ್ ಆಫೀಸರ್ ಹುದ್ದೆಗೆ ಪಿಯುಸಿ ಹಾಗೂ ಯಾವುದೇ ಪದವಿ ಪಡೆದಿರಬೇಕು. ಯುರೇಕಾ ಫೋರ್ಬ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಶ್ರೀ ಪೇದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಮತ್ತು ಯಾವುದೇ ಪದವಿ ಪಾಸಾಗಿರಬೇಕು. ಸ್ಟಾಫ್ ಲೂಮ್ ಗ್ಲೋಬಲ್ ಸಲೂಷನ್ಸ್ನಲ್ಲಿ ಡಿಇಒ, ಟೆಕ್ನಿಷಿಯನ್ ಹುದ್ದೆಗೆ ಐಟಿಐ, ಡಿಪ್ಲೊಮಾ, ಬಿಇ (ಮೆಕಾನಿಕಲ್), ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಗಿಗಿನ್‌ಜಾಬ್ಸ್ದಲ್ಲಿ ವಿವಿಧ ಹುದ್ದೆಗಳಿಗೆ ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು.
ಅಭ್ಯರ್ಥಿಗಳು ಅಂಕಪಟ್ಟಿ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ), ಭಾವಚಿತ್ರ ಮತ್ತು ಆಧಾರ್ ಕಾರ್ಡ್ನೊಂದಿಗೆ ಮೇಳದಲ್ಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ದೂ.೦೮೪೭೨-೨೭೪೮೪೬, ಮೊ.೯೬೨೦೦ ೯೫೨೭೦ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.