ಮಿಂಚಿದ ಬ್ರೆಜಿಲ್ ಮಹಿಳೆ

bkt-8-12
ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಪವಾಡಶೆಟ್ಟಿ ಕುಟುಂಬದ ಮದುವೆ ಸಂಭ್ರಮದಲ್ಲಿ ಭಾರತೀಯ ಸಂಪ್ರದಾಯದಂತೆ ಸೀರೆಯಲ್ಲಿ ಮಿಂಚಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಬ್ರೆಜಿಲ್ ದೇಶದ ಮಾರ್ಷೆಲಾ.
Published on

ಬಾಗಲಕೋಟೆ: ರಾಕ್ ಕ್ಲೈಬಿಂಗ್‌ಗೆ ಎಂದು ಬಾದಾಮಿಗೆ ಬಂದಿದ್ದ ವಿದೇಶಿ ಮಹಿಳೆಗೆ ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಪರಿಚಯಿಸುವ ಕೆಲಸವನ್ನು ಬಾದಾಮಿ ತಾಲೂಕಿನ ಚೊಳಚಗುಡ್ಡದ ಪವಾಡಶೆಟ್ಟಿ ಕುಟುಂಬದವರು ಮಾಡಿದ್ದಾರೆ
ಬ್ರೆಜಿಲ್ ಮೂಲದ ಮಾರ್ಷೆಲಾ ಎನ್ನುವ ವಿದೇಶಿ ಮಹಿಳೆಗೆ ತಮ್ಮ ಮನೆಗೆ ಮದುವೆ ಕಾರ್ಯಕ್ಕೆ ಆಹ್ವಾನಿಸಿ ಅವರಿಗೆ ನಮ್ಮ ಸಂಪ್ರದಾಯದಂತೆ ಉಡುಗೆ, ತೊಡುಗೆ ತೊಡುವಂತೆ ಮಾಡಿ, ಹಣೆಗೆ ಕುಂಕುಮ, ಕೈಗೆ ಹಸಿರು ಬಳೆ, ಗಲ್ಲಕ್ಕೆ ಹರಿಷಿಣ ಹಚ್ಚಿ ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಮಾರ್ಷೆಲಾ ಸಹ ಅತ್ಯಂತ ಉತ್ಸುಕಳಾಗಿ ಪಾಲ್ಗೊಂಡಿದ್ದಲ್ಲದೇ ಎಲ್ಲ ಮಹಿಳೆಯರ ಜೊತೆ ಸೇರಿ ಸಂಭ್ರಮ ಪಟ್ಟಿದ್ದಾರೆ.
ಬ್ರೆಜಿಲ್‌ನ ಮಾರ್ಷೆಲಾ ಅವರು ರಾಕ್ ಕ್ಲಬಿಂಗ್ಗ್‌ಗೆಂದು ಬಾದಾಮಿಗೆ ಆಗಮಿಸಿದ್ದು, ಅವರು ಚೊಳಚಗುಡ್ಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಇದ್ದಾರೆ. ಅವರ ಮನೆ ಪಕ್ಕದಲ್ಲಿ ಇರುವ ಬಸವರಾಜ ಪವಾಡಶೆಟ್ಟಿ ಅವರ ಸಹೋದರನ ಪುತ್ರ ಶರತಚಂದ್ರ ಎನ್ನುವವರು ಮದುವೆ ಫೆ. ೯ ರಂದು ಇದ್ದು, ಮದುವೆ ಹಿನ್ನಲೆಯಲ್ಲಿ ಮನೆಯಲ್ಲಿ ಮಹಿಳೆಯರನ್ನು ಕರೆದು ಮಾಡುವ ಬಳೆ ತೊಡೆಸುವ ಕಾರ್ಯಕ್ಕೆ ನೆರೆಹೊರೆಯವರನ್ನು ಆಹ್ವಾನಿಸುವಂತೆ ಬಾಡಿಗೆ ಮನೆಯಲ್ಲಿ ಇದ್ದ ಮಾರ್ಷೆಲಾ ಅವರಿಗೆ ಕುಂಕುಮ ಕೊಟ್ಟಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಬಳೆ ತೊಡಿಸುವ ಕಾರ್ಯಕ್ಕೆ ಆಗಮಿಸಿದ ಮಾರ್ಷೆಲಾ, ಭಾರತೀಯ ಸಂಪ್ರದಾಯದಂತೆ ಮೈತುಂಬಿ ಸೀರೆ ತೊಟ್ಟುಕೊಂಡು ಆಗಮಿಸಿದ್ದು, ಅವರಿಗೆ ಸಂಪ್ರದಾಯದಂತೆ ದಂಡಿಹಾರ ಹಾಕಿ, ಕುಂಕುಮ ಹಚ್ಚಿ ಆರತಿ ಬೆಳಗಿ, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಪರಿಚಯವನ್ನು ಪವಾಡಶೆಟ್ಟಿ ಕುಟುಂಬದ ಮಹಿಳೆಯರು ಮಾಡಿದ್ದಾರೆ. ಆ ಮೂಲಕ ಈ ಘಟನೆ ಎಲ್ಲರ ಗಮನ ಸೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net