ಮಾಲ್ದಾರೆಯ ಸ್ಯಾಂಡಿ, ಸುಬ್ರಮಣಿಗೆ ಚಿನ್ನದ ಪದಕ

SDP
ವಾಲಿಬಾಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಮಾಲ್ದಾರೆಯ ಸ್ಯಾಂಡಿ ಹಾಗೂ ಸುಬ್ರಮಣಿ
Published on

ಸಿದ್ದಾಪುರ: ಒಡಿಶಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಜಾತಿಯ ಖೇಲ್ ಮಹೋತ್ಸವ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ವಾಲಿಬಾಲ್ ಅಸೋಸಿಯೇಷನ್‌ನ ಪುರುಷರ ತಂಡ ಚಿನ್ನದ ಪದಕ ಪಡೆದಿದೆ.

ಮಾಲ್ದಾರೆ ಗ್ರಾಮದ ಗೇಟ್ ಹಾಡಿಯ ಗಿರಿಜನರ ಕಾಲನಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜೆ.ರ್.ಇಂದಿರಾ ಅವರ ಪುತ್ರ ಸ್ಯಾಂಡಿ ಹಾಗೂ ರಮೇಶ್ ಅವರ ಪುತ್ರ ಸುಬ್ರಮಣಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು, ಚಿನ್ನದ ಪದಕ ಪಡೆದು ಜಿಲ್ಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಆದಿವಾಸಿ ಮುಖಂಡ ಜೆ. ಕೆ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net