ಮಾರುಕಟ್ಟೆಯಲ್ಲಿ ಖರೀದಿಗೆ ಭರಾಟೆ

24ark3
ಅರಕಲಗೂಡಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆಗಾಗಿ ಗುರುವಾರ ಬಾಳೆ ಕಂದು ಹೂವು ಖರೀದಿಸುತ್ತಿರುವ ಭಕ್ತರು.
Published on

ಅರಕಲಗೂಡು: ವರ ಮಹಾಲಕ್ಷ್ಮೀ ಹಬ್ಬದ ಆಚರಣೆಗಾಗಿ ಗುರುವಾರ ಪಟ್ಟಣದಲ್ಲಿ ಅಗತ್ಯ ವಸ್ತುಗಳ ವ್ಯಾಪಾರದ ಭರಾಟೆ ಜೋರಾಗಿ ಸಾಗಿತ್ತು.

ಮಾರುಕಟ್ಟೆಗಳಲ್ಲಿ ದಿನವಿಡೀ ಜನಜಂಗುಳಿಯಿಂದ ತುಂಬಿತ್ತು. ಹೂವು, ಹಣ್ಣು, ಬಾಳೆ ಕಂದು, ಬಳೆ ಮತ್ತಿತರ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಭಕ್ತರು ಮುಗಿ ಬಿದ್ದರು. ಹಬ್ಬದ ಆಚರಣೆಗಾಗಿ ರಾಮನಾಥಪುರ, ಕೊಣನೂರು, ಬಸವಾಪಟ್ಟಣ ಹಾಗೂ ಮಲ್ಲಿಗೆಪುರ ಖ್ಯಾತಿಯ ಕೇರಳಾಪುರದ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಬಿರುಸಿನಿಂದ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net