ಮಾರಿಕಾಂಬಾ ದೇವಾಲಯ ಸ್ಯಾನಿಟೈಸ್

7sirsi2
Published on

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಮಂಗಳವಾರ ಸ್ಯಾನಿಟೈಸ್ ಮಾಡಲಾಯಿತು. ಕೋವಿಡ್​- 19 ವೈರಸ್ ಹರಡುವ ಭಯದಿಂದ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಜನರು ಸ್ವಯಂ ಪ್ರೇರಿತವಾಗಿ ಲಾಕ್​ಡೌನ್​ಗೆ ಮುಂದಾಗಿದ್ದಾರೆ.

ನಿತ್ಯ ಕರೊನಾ ಪ್ರಕರಣ ನಗರದಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಬೀದಿಗೆ ಬರುಲು ಹಿಂದೇಟು ಹಾಕುತ್ತಿದ್ದಾರೆ. ಇದೇ ವೇಳೆ ಅಂಗಡಿಕಾರರು ಕೂಡ ಅಂಗಡಿ ಬಾಗಿಲು ಹಾಕಲು ಮುಂದಾಗಿದ್ದಾರೆ. ಕ್ಷೌರದಂಗಡಿ, ಬಂಗಾರದ ಆಭರಣದ ಅಂಗಡಿಗಳನ್ನು ಕೆಲ ದಿನಗಳವರೆಗೆ ಬಂದ್ ಮಾಡುವುದಾಗಿ ಆಯಾ ಸಂಘಟನೆಗಳು ಮಾಹಿತಿ ನೀಡಿವೆ. ಕೆಲ ಹೋಟೆಲ್​ಗಳನ್ನು ಕೂಡ ಬಂದ್ ಮಾಡಿದ್ದು, ಜನರು ಊಟ- ಉಪಾಹಾರಕ್ಕೆ ಅಲೆದಾಡಿದರು. ಪ್ರಮುಖ ದೇವಾಲಯಗಳ ಬಾಗಿಲಿಗೆ ಬೀಗ ಹಾಕಲಾಗಿದೆ. ಕೆಲ ದಿನಗಳವರೆಗೆ ಭಕ್ತರು ಬರದಂತೆ ಕೋರಲಾಗಿದೆ. ಜತೆಗೆ ದೇವಾಲಯಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ನಗರದಲ್ಲಿ ಶೇ. 50ಕ್ಕಿಂತ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ವ್ಯಾಪಾರಸ್ಥರು ಬಂದ್ ಮಾಡಿ ಮುಂಜಾಗ್ರತೆ ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net