ಮಾನಸ ಬಡಾವಣೆಯಲ್ಲಿ ಚಂದು ಪಾಟೀಲ್ ಅವರಿಗೆ ಸನ್ಮಾನಿಸಿದ ಹಿರಿಯ ಉದ್ಯಮಿ ಸುಭಾಷ ಬಿಜಾಪುರ

IMG-20230722-WA0060
Published on


ಕಲಬುರಗಿ : ನಗರದ ಸೇಡಂ ರಸ್ತೆಯಲ್ಲಿ ಗುವಿವಿ ಎದುರಗಡೆ ಇರುವ ಮಾನಸ ಬಡಾವಣೆಗೆ ಕ್ರೆಡಲ್ ಮಾಜಿ ಅಧ್ಯಕ್ಷರು ಆಗಿರುವ ಬಡವರ ಬಂಧು, ಸರಳ ಸಜ್ಜನಿಕೆಯ ಬಜೆಪಿ ಯುವ ನಾಯಕರಾದ ಚಂದು ಪಾಟೀಲ್
ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾನಸ ಬಡಾವಣೆಯ ನಿವಾಸಿಗಳಾದ ಹಿರಿಯ ಉದ್ಯಮಿಗಳಾದ ಶ್ರೀಯುತ ಸುಭಾಷ್ ಬಿಜಾಪುರ ಅವರ ಮನೆಗೆ ಭೇಟಿ ನೀಡಿದರು. ಈ ವೇಲೆಯಲ್ಕಿ ಬಿಜಾಪುರ ಪರಿವಾರದಿಂದ ಚಂದು ಪಾಟೀಲ್ ಅವರನ್ನು ಸುಭಾಷ ಬೊಜಾಪುರೆ ಅವರುವಸನ್ಮಾನಿಸಿ ಗೌರವಿಸಿದರು.

ಕಳೆದೊಂದು ದಶಕದಿಂದ ಚಂದು ಪಾಟೀಲ್ ಅವರು ಮಾಡಿಕೊಂಡು ಬರುತ್ತಿರುವ ಸಮಾಜಮುಖಿ ಕಾರ್ಯಗಳು ಹಾಗೂ ಜನ ಸೇವೆ ನೋಡಿದಾಗ ಈ ಸಲ ವಿಧಾನ ಸಭೆ ಚುನಾವಣೆಯಲ್ಲಿ ಚಂದು ಪಾಟೀಲ್ ಗೆಲ್ಲಬೇಕಾಗಿತ್ತು. ಅಲ್ಪ ಮತಗಳಿಂದ‌ ಸೋತಿದ್ದಾರೆ. ಇದು ಅವರ ಸೋತಂತೆ‌ ಅಲ್ಲ ಗೆದ್ದಂತೆ ಎಂದು‌ ಬಿಜಾಪುರ ಅವರು ಹೇಳಿದರು. ಇಡಿ ಕಲಬುರಗಿ ಜನರು ನಿಮ್ಮಂತ ಸಾತ್ಚಿಕ ವ್ಯಕ್ತಿ ಜತೆಗೆ ಇದ್ದಾರೆ.‌ ನೀವು‌ ಮುನ್ನುಗ್ಗಿ ನಡೆಯಿರಿ‌ ಮುಂದಿನ ಸಲ ಮತದಾರರು‌ ಖಂಡಿತ ಆರ್ಶಿವಾದ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net