

ಬಾಗಲಕೋಟೆ: ವೈದ್ಯಕೀಯ ಜ್ಞಾನದ ಜೊತೆಗೆ ಮಾನವೀಯ ಸೇವಾ ಮನೋಭಾವ ಬೆಳಸಿಕೊಳ್ಳಬೇಕು. ಸಮಾಜಕ್ಕೆ ವೈದ್ಯರ ಋಣಿಯಾಗಿರಬೇಕು ಎಂದು ರಾಜೀವ ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಭಗವಾನ ಬಿ.ಸಿ ಹೇಳಿದರು.
ನಗರದ ಮೆಡಿಕಲ್ ಕಾಲೇಜಿನ ಶತಾಬ್ಧಿ ಸಭಾಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ೧೬ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಭವಿಷ್ಯದ ವೃತ್ತಿಪರ ಬದುಕಿನಲ್ಲಿ ನೈತಿಕ ಸವಾಲುಗಳನ್ನು ಎದರಿಸುಲು ಪ್ರಮಾಣಿಕತೆ ಬಹಳ ಮುಖ್ಯವಾಗಿರುತ್ತದೆ. ನಿರಂತರ ಕಲಿಕಾ ಕೌಶಲ, ಸಂಶೋಧನಾ ಕೌಶಲ ಹಾಗೂ ವಿವಿಧ ವೃತ್ತಿಪರ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಜ್ಞಾನಕ್ಕಿಂತ ಮಿಗಿಲಾದ ಸಹಾನುಭೂತಿ ಹಾಗೂ ಮಾನವಿಯ ಮೌಲ್ಯಗಳ ಬಗ್ಗೆ ಅರಿವು ಕೂಡ ಮುಖ್ಯವಾಗಿವೆ. ಉತ್ತಮ ಸೇವೆ ಸಲ್ಲಿಸುವರಿಗೆ ಸಮಾಜ ಗೌರವಿಸುತ್ತದೆ ಎಂದು ಕಿವಿ ಮಾತು ಹೇಳಿದರು.
ಳೆದ ೨೪ ವರ್ಷಗಳಿಂದ ಈ ಮಹಾವಿದ್ಯಾಲಯ ಬಹಳಷ್ಟು ಬೆಳೆದಿದೆ ಹಾಗೂ ಎಲ್ಲ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ೪೦೦ ಹಾಸಿಗೆಯ ಸುಸಜ್ಜಿತ ಅತ್ಯಾಧುನಿಕ ಸೂಪರ ಸ್ಪೇಶಾಲಿಟಿ ಆಸ್ಪತ್ರೆ ಶೀರ್ಘದಲ್ಲೇ ಪ್ರಾರಂಭಿಸಲಾಗುವುದು. ಅಲೋಪತಿಕ್ ಮಡಿಕಲ್ ಬಿಟ್ಟು ಹೋಮಿಯೋಪಥಿ ಹಾಗೂ ಆಯುರ್ವೇದ ಮಹಾವಿದ್ಯಾಲಯಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ತೆಗೆಯುವ ಬಗ್ಗೆ ಸರ್ಕಾರಕ್ಕೆ ಗಮನ ಸೆಳೆಯುವಂತೆ ಉಪಕುಲಪತಿಗಳಿಗೆ ವಿನಂತಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ಡಾ.ಭಗವಾನ ಬಿ.ಸಿ. ಅವರನ್ನು ಸನ್ಮಾನಿಸಲಾಯಿತು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು. ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಮಂಜುಳಾ ಪಾಟೀಲ ಪರಿಚಯಿಸಿದರು. ಡಾ.ಸಂಜೀವ ಕೊಳಗಿ ಪ್ರತಿಜ್ಞಾವಿಽ ಬೋಽಸಿದರು. ಡಾ.ಮಹಾಂತೇಶ ಭೂತಾಳ ವಂದಿಸಿದರು. ಡಾ.ಜಯರಾಜ, ಡಾ.ಶಾಂಭವಿ ಹಾಗೂ ಡಾ.ವಿದ್ಯಾಶ್ರೀ ನಿರೂಪಿಸಿದರು.