

ಬಾಗಲಕೋಟೆ: ಪ್ರತಿಯೊಬ್ಬ ವ್ಯಕ್ತಿಗೆ ನೈಸರ್ಗಿಕವಾಗಿ ಬಂದAತಹ ಹಕ್ಕುಗಳನ್ನು ಚಲಾಯಿಸುವದರ ಜೊತೆಗೆ ಅವುಗಳ ಉಲ್ಲಂಘನೆಯಾಗದAತೆ ನೋಡುಕೊಳ್ಳುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಹೇಳಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಹಕ್ಕು ಗಳ ರಕ್ಷಣೆಯಿಂದ ಉತ್ತಮ ಸಮಾಜ ಕಾಣಲು ಸಾಧ್ಯವಿದೆ ಎಂದರು.
೨ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಽಶ ಜಿ.ಎ.ಮೂಲಿಮನಿ ಮಾತನಾಡಿ, ಮೂಲಭೂತ ಹಕ್ಕುಗಳು ಜನತೆಗೆ ಮಾರಕವಾದರೆ ಹಕ್ಕುಗಳಿಗೆ ವಂಚನೆಯಾದರೆ ಪ್ರತಿಪಾದಿಸುವ ಕೆಲಸವಾಗಬೇಕು. ಕಾನೂನಿನಲ್ಲಿ ಸಾರ್ವಜನಿಕರಿಗೆ ಮಾನವ ಹಕ್ಕುಗಳಿಗೆ ಉಲ್ಲಂಘನೆಯಾದAತ ಸಂದರ್ಭದಲ್ಲಿ ವಿಶಿಷ್ಟವಾದ ಅಽಕಾರ ನೀಡಿದ್ದಾರೆ. ರಾತ್ರಿ ೧೨ ಗಂಟೆಯಾದರೂ ಸುಪ್ರಿಂ ಕೋರ್ಟನಲ್ಲಿ ಕೇಳಲು ಕಾನೂನಿಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಒಂದು ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ, ಪ್ರತಿಯೊಬ್ಬರ ನಾಗರಿಕನೂ ತಮ್ಮ ಹಕ್ಕುಗಳನ್ನು ಪಡೆಯಬೇಕು. ಆದರೆ ಹಕ್ಕುಗಳನ್ನು ಪಡೆಯಬೇಕಾದರೆ ತಾವುಗಳು ಆ ಹಕ್ಕುಗಳ ಅಡಿಯಲ್ಲಿನ ಕರ್ತವ್ಯ ಮಾಡಬೇಕು. ಯಾವ ವ್ಯಕ್ತಿ ಕರ್ತವ್ಯವನ್ನು ಪಾಲಿಸದೇ ಕೇವಲ ಹಕ್ಕನ್ನು ಪಡೆಯಲಿಕ್ಕೆ ಹೋದವರು ಅಂತಹವರಿಗೆ ಹಕ್ಕುಗಳು ಅಸಿಂಧವಾಗಿರುತ್ತದೆ. ಇಂತಹ ಶ್ರೇಷ್ಠವಾದ ಹಕ್ಕುಗಳನ್ನು ಯಾರಿಂದಲೂ ಮೊಟಕುಗೊಳಿಸಲು ಸಾಧ್ಯವಿಲ್ಲ. ರಾಷ್ಟçಪತಿಗಳು ಮಾತ್ರ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಮಾತ್ರ ಇಂತಹ ಹಕ್ಕುಗಳನ್ನು ಹಿಂಪಡೆಯಬಹುದು ಎಂದರು.
ಜಿ.ಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಮಾನವ ಹಕ್ಕುಗಳಿಗೆ ಸಂಬAಽಸಿದAತೆ ಕಳೆದ ಒಂದು ವರ್ಷದಲ್ಲಿ ೯೫ ಸಾವಿರ ಪ್ರಕರಣಗಳ ದಾಖಲಾಗಿವೆ. ಇವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನಂಪ್ರತಿ ದೂರುಗಳ ಸಂಖ್ಯೆ ಕಡಿಮೆಯಾಗ ಕಷ್ಟದಲ್ಲಿರುವ ವ್ಯಕ್ತಿಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಹಾಯ ಮಾಡಿದಾಗ ಮಾನವ ಹಕ್ಕುಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಜಿದ್ದಿ ಮಾತನಾಡಿ, ಸಂವಿಧಾನದಲ್ಲಿ ನೀಡಿರುವ ಮಾನವ ಹಕ್ಕುಗಳ ಬಗ್ಗೆ ಮಹತ್ವದ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಽಕಾರಿ ಜಾನಕಿ ಕೆ.ಎಂ ಮಾನವ ಹಕ್ಕುಗಳ ಕುರಿತು ಪ್ರತಿಜ್ಞಾವಿಽ ಬೋಽಸಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ಜಿ.ಪಂ ಮುಖ್ಯ ಲೆಕ್ಕಾಽಕಾರಿ ಪುನೀತ ಕೆ. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಽಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.