ಮಾದಿಗ, ಲಂಬಾಣಿಗರಿಗೆ ಅನ್ಯಾಯ

fb5b1fa4-64fe-45ce-a3b5-09a0bf51ae0f
Published on

ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾವನ ಹೆಸರಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ಆದರೆ ಇವರು ಜನರ ಸೇವೆ, ಅಭಿವೃದ್ಧಿ ಮಾಡಿಲ್ಲ. ಹಿಂಬಾಗಿಲ ರಾಜಕೀಯ ಮಾಡಿ ಎಂಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಟೀಕಿಸಿದರು.

ಭಂಕೂರದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಧಾಕೃಷ್ಣ ದೊಡ್ಡಮನಿ ಅಭ್ಯರ್ಥಿಯಾಗಲು ಮಲ್ಲಿಕಾರ್ಜುನ ಖರ್ಗೆ ಅಳಿಯ ಎಂಬುದೊಂದೇ ಮಾನದಂಡ. ತಾನು ರಾಜ್ಯಸಭೆ ಸದಸ್ಯ, ಮಗ ಎಂಎಲ್‌ಎ ಮತ್ತು ಮಂತ್ರಿ, ಉಸ್ತುವಾರಿ ಸಚಿವ. ಈಗ ಅಳಿಯ ಎಂಪಿ ಅಭ್ಯರ್ಥಿ ಹೀಗೆ ಖರ್ಗೆ ಕುಟುಂಬ ರಾಜಕಾರಣ ಪೋಷಿಸುತ್ತಿದ್ದಾರೆ. ಪರೀಕ್ಷೆದಲ್ಲಿ ಇತರರು ಇಲ್ವೆ? ಬೇರೆಯವರನ್ನು ಬೆಳೆಸದೆ ಎಲ್ಲ ನಾಯಕರನ್ನು ಹಿಂಬಾಲಕರನ್ನಾಗಿ ಮಾತ್ರ ಇಟ್ಟುಕೊಂಡಿದ್ದಾರೆ ಎಂದು ಹರಿಹಾಯ್ದರು.

ಕಲಬುರಗಿಯಲ್ಲಿ ಲಂಬಾಣಿ ಸಮಾಜಕ್ಕೆ ಎರಡು ಬಾರಿ ಟಿಕೆಟ್ ನೀಡಿ ಕುತಂತ್ರದಿಂದ ಸೋಲಿಸಿದ್ದೀರಿ. ಆದರೆ ಖರ್ಗೆ ಸೋಲಿಲ್ಲದ ಸರದಾರ ಎಂದು ಬೀಗುತ್ತಿದ್ದಾರೆ. ಹಿಂದುಳಿದ ಸಮುದಾಯದವರಿಗೆ ಸೂಕ್ತ ಅವಕಾಶ ನೀಡಿದರೆ ನಾವು ಕೂಡ ಸೋಲಿಲ್ಲದ ಸರದಾರರಾಗಿ ರಾಜಕೀಯದಲ್ಲಿ ಬೆಳೆಯುತ್ತಿದ್ದೇವು. ನಮ್ಮಂಥವರನ್ನು ಮೂಲೆಗುಂಪು ಮಾಡಿದ ಕೀರ್ತಿ ಖರ್ಗೆ ಅವರಿಗೆ ಸಲ್ಲುತ್ತದೆ. ಅದಕ್ಕಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ ಎಂದು ಚವ್ಹಾಣ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net