ಮಾತೃಭಾಷೆ ಮೂಲಕ ಸಂಸ್ಕೃತಿ ಉಳಿವು

bkt-23-3
ಬಾಗಲಕೋಟೆ ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದವರು ಶನಿವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟಿçÃಯ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಧ್ಯಾಪಕ ಡಾ.ಮೌನೇಶ ಕಮ್ಮಾರ ಅವರನ್ನು ಸನ್ಮಾನಿಸಲಾಯಿತು.
Published on

ಬಾಗಲಕೋಟೆ: ಭಾಷೆ ಬದುಕಿನ ಕೋಶ. ಭಾಷೆ ಮನುಷ್ಯನಿಗೆ ದಕ್ಕಿದ ಸಂಪತ್ತು. ಅದು ದೊರೆಯದಿದ್ದರೆ ಮನುಷ್ಯ ಪ್ರಾಣಿ ಹಾಗೆ ಬದುಕಬೇಕಾಗಿತ್ತು. ಹೀಗಾಗಿ ಮಾತೃಭಾಷೆಗೆ ಬಹಳಷ್ಟು ಮಹತ್ವ ಇದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಭಾಷೆ ಮೂಲಕ ಸಂಸ್ಕೃತಿ ಅಚ್ಚಳಿಯದೇ ಉಳಿದಿದೆ ಎಂದು ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಧ್ಯಾಪಕ ಡಾ.ಮೌನೇಶ ಕಮ್ಮಾರ ಹೇಳಿದರು.

ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದವರು ಶನಿವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟಿçÃಯ ಮಾತೃ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತೃ ಭಾಷೆ ಎಂಬ ಬೆಚ್ಚಗಿನ ಮಡಿಲು ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಮಾತೃಭಾಷೆಯೆಂಬ ಬೆಚ್ಚಗಿನ ಮಡಿಲು. ಅದರಲ್ಲಿ ಧೋಷವಿರುವದಿಲ್ಲ. ಯಾವುದು ಭಾಷೆ ಮೇಲು, ಕೀಳಾಗಿ ಕಾಣಬಾರದು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡದಲ್ಲಿ ನೀಡುವುದು ಅವಶ್ಯವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಮನಸ್ಥಿತಿ ಬಳಸಿಕೊಳ್ಳಬೇಕು. ಮಾತೃ ಭಾಷೆಯು ನಮ್ಮ ಭಾವನೆಗಳನ್ನು ಹೊರ ಹಾಕುವುದರಲ್ಲಿ ಸಮರ್ಥವಾಗಿದೆ. ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಮಗುವಿಗೆ ತಾಯಿಯ ಮಡಿಲು ಎಷ್ಟು ಸುರಕ್ಷಿತವಾಗಿದೆಯೋ ಹಾಗೆ ನಮ್ಮ ಕನ್ನಡ ಮಾತೃಭಾಷೆಯಿಂದ ನಾವೆಲ್ಲ ಸುರಕ್ಷಿತವಾಗಿರುವೆವು. ನಮ್ಮ ಸಂಸ್ಕೃತಿಯ ಜೊತೆಗೆ ನಮ್ಮ ಮಾತೃ ಭಾಷೆ ಉಳಿಯಲು ಸಾಧ್ಯ ಎಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ.ಒಡೆಯರ್ ಮಾತನಾಡಿ, ಮಾತೃಭಾಷೆಯಿಂದ ಎಲ್ಲ ಭಾವನೆಗಳು ಮನಸ್ಸಿನಲ್ಲಿ ನೆಲೆ ನಿಲ್ಲುತ್ತವೆ. ಮಾತೃ ಭಾಷೆ ಕಲಿಕೆಯಿಂದಲೇ ಜ್ಞಾನ ವಿಕಸಿತವಾಗುವುದು ಎಂದರು.

ಕನ್ನಡ ಭಾಗದ ಮುಖ್ಯಸ್ಥರಾದ ಡಾ.ಜಿ.ಐ.ನಂದಿಕೋಲಮಠ ಸ್ವಾಗತಿಸಿದರು. ಎ.ವಿ.ಪುರಾಣಿಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net