ಮಾತೃಭಾಷಾಭಿಮಾನ ಬೆಳೆಸುವ ಅಗತ್ಯ

Tegaltippi
Published on

ಕಲಬುರಗಿ: ನಮ್ಮ ಬದುಕು ಕಟ್ಟುವುದರ ಜತೆಗೆ ನಾಡು-ನುಡಿ ಒಂದುಗೂಡಿಸುವಲ್ಲಿ ನಾವಾಡುವ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮಕ್ಕಳಲ್ಲಿ ಮಾತೃಭಾಷಾಭಿಮಾನ ಬೆಳೆಸುವುದು ತುಂಬ ಅಗತ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ್ ಹೇಳಿದರು.
ಹತ್ತನೇ ಪರೀಕ್ಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹತ್ತರ ಕನ್ನಡಕೆ ಗುಣಾಗ್ರಣಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಅವರು, ಒತ್ತಡದ ಜೀವನದಲ್ಲಿ ನಾವಿz್ದÉÃವೆ. ಮಕ್ಕಳ ಭವಿಷ್ಯ ರೂಪಿಸಬೇಕಾದರೆ ಕೇವಲ ಅಂಕಗಳಿAದ ಸಾಧ್ಯವಿಲ್ಲ. ಸಾಧನೆಯಿಂದ ಮಾತ್ರ ಸಾಧ್ಯ. ದೃಢ ವಿಶ್ವಾಸದೊಂದಿಗೆ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆ ಅತ್ತಿವೇರಿ ಬಸವ ಧಾಮದ ಶ್ರೀ ಬಸವೇಶ್ವರಿ ಮಾತಾಜಿ ಮಾತನಾಡಿ, ಯಾವ ಭಾಷೆ ಮಾತನಾಡಿದರೂ ನಮ್ಮ ಹೃದಯಭಾಷೆ ಪ್ರೀತಿಸಿ ಗೌರವಿಸಬೇಕು. ಕನ್ನಡ ಎಂದರೆ ಅಸಡ್ಢೆ ತೋರದೆ ಅಭಿಮಾನ ಪಡಬೇಕು. ತಮಿಳು, ಕನ್ನಡ, ಸಂಸ್ಕೃತಿ ಭಾಷೆಗಳು ಪ್ರಾಚೀನವಾಗಿದ್ದರೂ ನಮ್ಮ ಅನ್ನದ ಭಾಷೆಗಳಾಗಿವೆ ಎಂದು ನುಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾಡಿನಲ್ಲಿ ಮಾತೃಭಾಷೆಗೆ ಆದ್ಯತೆ ನೀಡಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಈ ನೆಲದ ವಾರಸುದಾರರಾದ ನಾವೆಲ್ಲರೂ ಮಾಡಬೇಕಿದೆ. ಕನ್ನಡ ಉಳಿದರೆ ಕನ್ನಡಿಗ ಉಳಿಯುತ್ತಾನೆ. ಕನ್ನಡಿಗ ಉಳಿದರೆ ಮಾತ್ರ ಕರ್ನಾಟಕ ಉಳಿಯಲು ಸಾಧ್ಯ. ಹೀಗಾಗಿ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ನೇತೃತ್ವದಲ್ಲಿ ಆಂದೋಲನ ಶುರು ಮಾಡಲಾಗುತ್ತಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಡಾ.ಸುರೇಶ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ಗುರೂಜಿ ಪದವಿ ಕಾಲೇಜು ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ, ಶಕುಂತಲಾ ಪಾಟೀಲ್ ಜಾವಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ಧರ್ಮರಾಜ ಜವಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ ಮಾತನಾಡಿದರು.
ಪ್ರಮುಖರಾದ ಗುರುಬಸಪ್ಪ ಸಜ್ಜನಶೆಟ್ಟಿ, ಸುರೇಶ ದೇಶಪಾಂಡೆ, ಪ್ರಭುಲಿಂಗ ಮೂಲಗೆ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಎಸ್.ಕೆ. ಬಿರಾದಾರ, ಎಂ.ಎನ್. ಸುಗಂಧಿ, ಎಚ್.ಎಸ್. ಬರಗಾಲಿ, ರವಿಕುಮಾರ ಶಹಾಪುರಕರ್, ಎಸ್.ಪಿ. ಸುಳ್ಳದ್, ಶಿವಶರಣ ಹಡಪದ, ಆಶಾ ಹೆಗಡೆ, ಪರ್ವೀನ್ ಸುಲ್ತಾನಾ, ರೇವಣಸಿದ್ದಯ್ಯ ಹಿರೇಮಠ, ಶಿವಾನಂದ ಮಠಪತಿ, ವಿಶ್ವನಾಥ ತೊಟ್ನಳ್ಳಿ ಇತರರಿದ್ದರು. ಪರಿಷತ್‌ನಿಂದ ಜಿಲ್ಲೆಯ ೨೩೦ಕ್ಕೂ ಹೆಚ್ಚು ಕನ್ನಡ ಅಂಕವೀರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net