

ಬಾಗಲಕೋಟೆ: ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಮಾತುಕೊಟ್ಟಂತೆ ಯೋಜನೆಗಳನ್ನು ನೀಡಲು ಬದ್ಧವಿದೆ. ಮಾತು ತಪ್ಪಿದರೇ ಮತ್ತೆ ಮತ ಕೇಳಲು ಬರುವದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ನವನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲಂಚಾವತಾರದಲ್ಲಿ ಮುಳಗಿ ಹೋಗಿದೆ. ಪಿಎಸ್‌ಐ ನೇಮಕಾತಿ, ಶಿಕ್ಷಕರ ನೇಮಕಾತಿಯಲ್ಲಿ ಕಾಂಚಾನ ಸದ್ದು ಮಾಡಿದೆ. ಇಂತಹ ಸರ್ಕಾರ ಕಿತ್ತೊಗೆಯಬೇಕು. ಬಾಗಲಕೋಟೆ ಜಿಲ್ಲೆಗೆ ಬಿಜೆಪಿ, ಕಾಂಗ್ರೆಸ್ ಕೊಡುಗೆ ಏನು ಇಲ್ಲ. ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿದ್ದು, ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪಿಸಿದ್ದು ಜನತಾ ದಳ ಸರ್ಕಾರ. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ಮತ ನೀಡಬೇಕು. ನಾವು ಮಾತು ಕೊಟ್ಟಂತೆ ನಡೆದುಕೊಳ್ಳಲಿಲ್ಲ ಎಂದರೇ ಮತ್ತೆ ಮತ ಕೇಳಲು ಬರುವದಿಲ್ಲ ಎಂದು ವಾಗ್ದಾನ ಮಾಡಿದರು.