ಮಾಣೇಶ್ವರ ಮಂದಿರದ ಹಿಂದಿನ ಗುಡ್ಡ ಕುಸಿತ

24gkn1-a=
Published on

ಗೋಕರ್ಣ: ಸಮುದ್ರ ತೀರದ ಬಳಿ ಎತ್ತರದ ಗುಡ್ಡದ ಮೇಲಿರುವ ಪುರಾತನ ಮಾಣೇಶ್ವರ ಮಂದಿರದ ಹಿಂದಿರುವ ಗುಡ್ಡ ಗುರುವಾರ ಬೆಳಗಿನ ಜಾವ ಕುಸಿದು ಕೆಲವು ಬಂಡೆಗಳು ಮಂದಿರತ್ತ ಉರುಳಿವೆ.

ಭಾರಿ ಗುಡ್ಡದ ಅರ್ಧ ಭಾಗ ಕುಸಿದಿದ್ದರೂ ಸದ್ಯ ಮಂದಿರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಇದು ಮುಂದುವರಿದಲ್ಲಿ ಕೆಲವು ಅಪಾಯಗಳು ಎದುರಾಗುವ ಸಾಧ್ಯತೆಗಳಿವೆ. ಮಂದಿರ ಸಮುದ್ರ ಮಟ್ಟದಿಂದ ಅಂದಾಜು 50 ಅಡಿ ಎತ್ತರದಲ್ಲಿದ್ದರೆ, ಅದರ ಹಿಂದಿನ ಪರ್ವತ ಪ್ರದೇಶ ಮಂದಿರದಿಂದ ಅಂದಾಜು 20 ಅಡಿ ಎತ್ತರದಲ್ಲಿದೆ. ಮಂದಿರದ ಜತೆಗೆ ಇದರ ಇಳಿಜಾರಿನಲ್ಲಿ ಮನೆಗಳು ಮತ್ತು ಮುಖ್ಯ ರಸ್ತೆಯೊಂದಿದೆ. ಈ ಪ್ರದೇಶ ಗೋಕರ್ಣದ ಸಮುದ್ರ ತೀರವನ್ನು ಎತ್ತರದಲ್ಲಿ ನಿಂತು ನೋಡಬಲ್ಲ ಸುಂದರ ವ್ಯೂ-ಪಾಯಿಂಟ್ ಆಗಿದೆ. ಆಕರ್ಷಣೀಯವಾದ ಈ ಮಂದಿರದ ಪರಿಸರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಗಿರೀಶ ಕಾಸರವಳ್ಳಿ, ಗಿರೀಶ ಕಾರ್ನಾಡ್ ಮುಂತಾದವರು ಚಿತ್ರೀಕರಣ ಮಾಡಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net