

ಕಲಬುರಗಿ: ಚೌಡೇಶ್ವರ ಕಾಲನಿಯಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ದೇವಸ್ಥಾನ ಸಮಿತಿ ಮಂಗಳವಾರ ಆಯೋಜಿಸಿದ್ದ ಅಮ್ಮನವರ ಪಲ್ಲಕ್ಕಿ ಮಹೋತ್ಸವಕ್ಕೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಮುಖಂಡರಾದ ಪ್ರಕಾಶ ಕಮಕನೂರ, ಜಗನ್ನಾಥ ಬಿ., ಬಸವರಾಜ ಜಂಬಗಾ, ರಾಜು ಸೊನ್ನ, ಮಾಣಿಕ ಸುರಪುರ, ದಿಲೀಪ ಕಿರಿಸಾವಳಗಿ, ಭೀಮರಾವ್ ಬೊಮ್ನಳ್ಳಿ ಇತರರಿದ್ದರು.