ಮಾಡಾಳು ಶ್ರೀಸ್ವರ್ಣ ಗೌರಿ ದರ್ಶನಕ್ಕೆ ಭಕ್ತರ ದಂಡು

Published on

ಅರಸೀಕೆರೆ ಗ್ರಾಮಾಂತರ: ಕಣಕಟ್ಟೆ ಹೋಬಳಿಯ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಶ್ರೀಸ್ವರ್ಣ ಗೌರಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ನಾನಾ ಕಡೆಯಿಂದ ಭಕ್ತರ ದಂಡೇ ಹರಿದು ಬರುತ್ತಿದೆ.

ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನ ಮತ್ತು ಮೂಲಸ್ಥಾನ ಗೌರಮ್ಮ ದೇವಿ ದೇವಾಲಯ ಅಭಿವೃದ್ಧಿ ಸಮಿತಿಯವರು ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸುಗಮ ವ್ಯವಸ್ಥೆ ಕಲ್ಪಿಸಿದ್ದಾರೆ.

ವಿವಿಧ ಮಠಗಳ ಮಠಾಧೀಶರು ಸೇರಿದಂತೆ ವಿವಿಧ ಪಕ್ಷದ ರಾಜಕಾರಣಿಗಳು, ಉದ್ಯಮಿಗಳು, ಸಾಹಿತಿ ಹಾಗೂ ಕಲಾವಿದರು ಸುಕ್ಷೇತ್ರಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದಾರೆ.

ಜಾತ್ರಾ ಮಹೋತ್ಸವದ ಆರನೇ ದಿನವಾದ ಭಾನುವಾರ ಹಾಸನ ಸಂಸದ ಶ್ರೇಯಸ್ ಪಟೇಲ್ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ರಾಂಪುರ ಶೇಖರಪ್ಪ ಕ್ಷೇತ್ರಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ದರು.

ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್, ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನಪ್ಪ, ಗ್ರಾಪಂ ಸದಸ್ಯ ಕೊಡ್ಲಿ ಬಸವರಾಜ್, ಮುಖಂಡರಾದ ಎಂ.ಸಿ. ನಟರಾಜ್, ಮಾಡಾಳು ಶಿವಲಿಂಗಪ್ಪ, ಎಂ.ಎಸ್. ಮುರಳೇಗೌಡಸ್ವಾಮಿ, ಕೋಡಿಮಠ ಎಜೆಂಟ್ ಸಿ. ಮಹಾದೇವಪ್ಪ, ಅಶೋಕ್, ಸಂತೋಷ್ ಚಂದ್ರಪ್ಪ , ಮಾಡಾಳು ಎಂ.ಡಿ.ಸೋಮಶೇಖರ್, ದಾಸಪ್ಪ ಕಟ್ಟೆ ತಿಮ್ಮಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net