ಮಾಜಿ ಸೈನಿಕ ಶಾಂತರಾಜುಗೆ ಸನ್ಮಾನ

28spt1
Published on

ಸೋಮವಾರಪೇಟೆ: ಮಾಜಿ ಸೈನಿಕ ಹಾಗೂ ಸಮಾಜ ಸೇವಕ ದೊಡ್ಡಮಳ್ತೆ ಗ್ರಾಮದ ಡಿ.ಡಿ.ಶಾಂತರಾಜು ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತರಾಜು ಅವರನ್ನು ರೋಟರಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಸನ್ಮಾನಿಸಿದರು.

ಶಾಂತರಾಜು ಅವರು ಗಿರಿಜನರ ಕುಟುಂಬದ ಇಬ್ಬರು ಹೆಣ್ಣು ಮಕ್ಕಳನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಆರೈಕೆ ಮಾಡುತ್ತ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಒಬ್ಬಳು ಪದವಿ ವ್ಯಾಸಂಗ ಮಾಡುತ್ತಿದ್ದು, ಇನ್ನೊಬ್ಬ ಬಾಲಕಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇಂತಹ ಅಪರೂಪ ವ್ಯಕ್ತಿತ್ವವುಳ್ಳ ಶಾಂತರಾಜು ದಂಪತಿ ನಮಗೆ ಮಾದರಿಯಾಗಿದ್ದಾರೆ ಎಂದು ಪೊನ್ನಪ್ಪ ಹೇಳಿದರು.

ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ವೀಣಾ ಮನೋಹರ್, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ಪದಾಧಿಕಾರಿಗಳಾದ ಡಿ.ಪಿ.ರಮೇಶ್, ರೋಟರಿ ಟ್ರಸ್ಟ್ ಅಧ್ಯಕ್ಷ ಪಿ.ಕೆ.ರವಿ, ವಲಯ ಸೇನಾನಿ ಪ್ರಕಾಶ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net