ಮಾಜಿ ಸಚಿವರಿಗೆ ಹನಿಟ್ರಾಪ್, ರು.೨೦ ಲಕ್ಷಕ್ಕೆ ಬೇಡಿಕೆ : ಕಾಂಗ್ರೆಸ್ ನಾಯಕಿ ಮಂಜುಳಾ, ಪತಿ ಶಿವರಾಜ ಸಿಸಿಬಿ ಬಲೆಗೆ

2610Klb12
Published on

ಕಾಂಗ್ರೆಸ್ ನಾಯಕಿ ಮಂಜುಳಾ, ಪತಿ ಶಿವರಾಜ ಸಿಸಿಬಿ ಬಲೆಗೆ | ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆಗೆ ಯತ್ನಿಸಿದ ದಂಪತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಾಂಗ್ರೆಸ್‌ನ ಮಾಜಿ ಸಚಿವರನ್ನು ಹನಿಟ್ರಾÈಪ್ ಖೆಡ್ಡಾಕೆ ಬೀಳಿಸಿ, ೨೦ ಲಕ್ಷ ರೂ. ಸುಲಿಗೆಗೆ ಯತ್ನಿಸಿದ್ದ ಅವರz್ದೆÃ ಪಕ್ಷದ ಕಾರ್ಯಕರ್ತೆ ಹಾಗೂ ನಲಪಾಡ್ ಬ್ರಿಗೇಡ್ ಕಲಬುರಗಿ ಜಿಲ್ಲಾಧ್ಯಕ್ಷೆ ಮತ್ತು ಪತಿಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹಣ ಮಾಡಲು ಹೊರಟ ದಂಪತಿ ಕಂಬಿ ಎಣಿಸುವಂತಾಗಿದೆ.

ನಲಪಾಡ್ ಬ್ರಿಗೇಡ್ ಜಿಲ್ಲಾಧ್ಯಕ್ಷೆಯೂ ಆಗಿರುವ ಕಾಂಗ್ರೆಸ್ ಮುಖಂಡೆ ಮಂಜುಳಾ ಪಾಟೀಲ್ ಮತ್ತು ಪತಿ ಶಿವರಾಜ ಪಾಟೀಲ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದವರು. ಜಿಲ್ಲೆಯಲ್ಲಿ ದಲಿತ ಸೇನೆ ಕಾರ್ಯಕರ್ತರು ಪೊಲೀಸರು, ಉದ್ಯಮಿಗಳನ್ನು ಹನಿಟ್ರಾÈಪ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ಮರೆಮಾಸುವ ಮುನ್ನವೇ ಮತ್ತೊಂದು ಹನಿಟ್ರಾÈಪ್ ಕೇಸ್ ಬೆಳಕಿಗೆ ಬಂದಿದೆ.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ ಗುತ್ತೇದಾರ್ ಅವರಿಗೆ ಹಲವಾರು ಸಲ ಮಂಜುಳಾ ಮತ್ತು ಶಿವರಾಜ ಕರೆ ಮಾಡಿ ನಿಮ್ಮ ತಂದೆ ನನಗೆ ನಿಂದನೆ ಮಾಡುವಂತ ಸಂದೇಶ ಕಳಿಸಿದ್ದಾರೆ. ಅವನ್ನು ಡಿಲೀಟ್ ಮಾಡಲು ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡದಂತಿರಲು ೨೦ ಲಕ್ಷ ರೂ. ಹಣ ನೀಡಲು ಬೇಡಿಕೆ ಇಟ್ಟಿದ್ದರು. ಅನೇಕ ಸಲ ಮಂಜುಳಾ ಕರೆ ಮಾಡಿ ಹಣ ಕೊಡುವಂತೆ ಕಾಡಿಸಿದ್ದರು. ಬೆಂಗಳೂರಿನ ಕೋಡಿಗೆಹಳ್ಳಿ ಕ್ರಾಸ್ ಬಳಿಯ ಹೋಟೆಲ್‌ಗೆ ಕರೆಸಿಕೊಂಡು ಎರಡು ದಿನಗಳ ಹಿಂದೆ ರಿತೇಶ್ ಮಾತನಾಡಿದ್ದ. ಅಷ್ಟೊಂದು ಹಣ ಕೊಡಲು ಆಗಲ್ಲ ಎಂದಿದ್ದ. ಆದರೂ ಕಮ್ಮಿ ಆಗಲ್ಲ ಎಂದು ಮಂಜುಳಾ ಮತ್ತು ಶಿವರಾಜ ಕಡ್ಡಿ ಮುರಿದಂತೆ ಹೇಳಿದ್ದರು. ೨೦ ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸುವುದರ ಜತೆಗೆ ತಂದೆ ಮಾಲೀಕಯ್ಯ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಸೇರಿಕೊಂಡು ಸಂಚು ನಡೆಸಿದ್ದಾರೆ ಎಂದು ದೂರಿನಲ್ಲಿ ರಿತೇಶ್ ಉಲ್ಲೇಖಿಸಿದ್ದಾರೆ.

ದಂಪತಿಯನ್ನೇ ಬಲೆಗೆ ಬೀಳಿಸಿದ ರಿತೇಶ್

ಮಾಜಿ ಸಚಿವರನ್ನು ಖೆಡ್ಡಾಗೆ ಬಿಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದಂಪತಿಗೆ ರಿತೇಶ್ ಖೆಡ್ಡಾಕ್ಕೆ ಬೀಳಿಸುವ ಮೂಲಕ ರಿವರ್ಸ್ ಆಪರೇಶನ್ ಮಾಡಿದ್ದಾರೆ. ಮೊದಲು ದಂಪತಿಗೆ ವಾಟ್ಸಪ್ ಕರೆ ಮಾಡಿ ಬೆಂಗಳೂರಿನ ಕೆಜಿ ಹಳ್ಳಿ ಕ್ರಾಸ್ ಬಳಿಯ ಹೋಟೆಲ್‌ಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಹಣ ತೆಗೆದುಕೊಂಡು ಹೋಗಲು ಬೆಂಗಳೂರಿಗೆ ಬಂದ ವೇಳೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಕಾಲಕ್ಕೆ ಹನಿಟ್ರಾÈಪ್ ಮಾಡಲು ಯತ್ನಿಸಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಸಿಬಿಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net