ಮಾಜಿ ಸಚಿವ ಚಿಂಚನಸೂರ ಆರೋಗ್ಯವಿಚಾರಿಸಿದ ಕೇಂದ್ರ ಸಚಿವ ಭಾನುಪ್ರತಾಪಸಿಂಗ್

Baburao Chinchansur 2
Published on

ಕಲಬುರಗಿ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಣೆ
ವಿಜಯವಾಣಿ ಸುದ್ದಿ ಜಾಲ ಕಲಬುರಗಿ
ಕೋಲಿ ಸಮಾಜ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಾಬುರಾವ ಚಿಂಚನೂರ ಅವರ ಕಲಬುರಗಿ ನಿವಾಸಕ್ಕೆ ಕೇಂದ್ರದ ಸೂP್ಷÀ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವ ಭಾನುಪ್ರತಾಪ ವರ್ಮಾ ಬುಧವಾರ ರಾತ್ರಿ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಇಬ್ಬರ ಮಧ್ಯೆ ಅರ್ಧಗಂಟೆಗೂ ಅಧಿಕ ಚರ್ಚೆ ನಡೆಯಿತು. ಈ ಭೇಟಿ ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಎಡೆಮಾಡಿದೆ.
ಮಾಧ್ಯಮಗಳೊಂದಿಗೆ ಬಾಬುರಾವ ಚಿಂಚನಸೂರ ಮಾತನಾಡಿ, ನಮ್ಮಿಬ್ಬರ ಮಧ್ಯೆ ಯಾವುದೇ ಮಹತ್ವದ ಮಾತುಕತೆ ನಡೆದಿಲ್ಲ. ನನ್ನ ಆರೋಗ್ಯ ವಿಚಾರಣೆಗೆ ಬಂದಿದ್ದರು. ದೇವರ ಅನುಗ್ರಹ, ಜನರ ಆಶೀರ್ವಾದದಿಂದ ಆರೋಗ್ಯ ಸುಧಾರಿಸಿದೆ. ಶೀಘ್ರ ಜನಸೇವೆಯಲ್ಲಿ ತೊಡಗಿಸಿಕೊಳ್ಳುವೆ. ಕೆಲವರು ನನ್ನ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಆನೆಯಂತೆ ಎಲ್ಲ ಕಡೆ ಓಡಾಡುತ್ತೇನೆ ಎಂದರು.
ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲಿಲ್ಲವೆಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿz್ದೆÃನೆ. ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭಾ ಪ್ರತಿಪP್ಷÀ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋಲಿ ಸಮಾಜದ ಸಾಧಕ-ಬಾಧಕ ಗೊತ್ತಿದೆ. ಅವರು ಎಸ್‌ಟಿಗೆ ಸೇರಿಸಲು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸAಸದ ಡಾ.ಉಮೇಶ ಜಾಧವ್, ಅಮರೇಶ್ವರಿ ಬಾಬುರಾವ ಚಿಂಚನಸೂರ, ಪ್ರಮುಖರಾದ ತಿಪ್ಪಣ್ಣರೆಡ್ಡಿ, ಶರಣಪ್ಪ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net