ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧವೂ ಎಫ್‌ಐಆರ್

200000000000000000
Published on

ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕೊಲೆಗೆ ಪ್ರಯತ್ನಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ಹೆಬ್ಬೂರು ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ.

ಸುರೇಶ್‌ಗೌಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಗುರುವಾರಷ್ಟೇ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ಷೇತ್ರದ ಇಬ್ಬರೂ ನಾಯಕರ ಸ್ವಪ್ರತಿಷ್ಠೆಗೆ ಪೊಲೀಸರು ಹೈರಾಣಾಗಿದ್ದಾರೆ.

ಶಾಸಕ ಗೌರಿಶಂಕರ್ ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲು ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬನಿಗೆ 5ಕೋಟಿ ರೂ. ಸುಫಾರಿ ನೀಡಿದ್ದಾರೆ ಎಂದು ಸುರೇಶಗೌಡ ದೂರು ನೀಡಿದ್ದರು..

ಪ್ರಸ್ತುತ ತುಮಕೂರು ತಾಲೂಕು ಹೆಬ್ಬೂರು ಠಾಣೆಯಲ್ಲಿ ಸುರೇಶ್‌ಗೌಡ ವಿರುದ್ಧ ಕಲಂ120(ಬಿ),ಐಪಿಸಿ 506ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net