ಮಾಜಿ ಶಾಸಕ ಬಿ.ನಾರಾಯಣರಾವ ಪುಣ್ಯಸ್ಮರಣೆ

24BK3
Published on

ಬಸವಕಲ್ಯಾಣ: ಮಾಜಿ ಶಾಸಕ ಬಿ.ನಾರಾಯಣ ತೃತೀಯ ಪುಣ್ಯ ಸ್ಮರಣೆ ನಿಮಿತ್ತ ನಗರದ ಸಸ್ತಾಪುರ ಬಂಗ್ಲಾ ಮುಡಬಿ ಕ್ರಾಸ್ ಹತ್ತಿರ ಇರುವ ಅವರ ಸಮಾಧಿಗೆ ಭಾನುವಾರ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವಿಧ ಪಕ್ಷದ ಮುಖಂಡರು ಭಾಗವಹಿಸಿ ನಾರಾಯಣರಾವ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಗೌರವಿಸಿದರು.

ಈ ವೇಳೆ ಪ್ರಮುಖರು ಮಾತನಾಡಿ, ನಾರಾಯಣರಾವ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆ, ಅಭಿವೃದ್ಧಿಯ ಬಗ್ಗೆ ಅವರಿಗಿದ್ದ ದೂರದೃಷ್ಠಿ, ಹೋರಾಟದ ಬದುಕು, ಸರಳ ವ್ಯಕ್ತಿತ್ವ, ಜನಪರ ಕಾಳಜಿಯನ್ನು ಸ್ಮರಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾಂಗ್ರೆಸ್ ಮುಖಂಡರಾದ ಮಾಲಾ ನಾರಾಯಣರಾವ, ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ಬಿಜೆಪಿ ಮುಖಂಡ ಪದ್ಮಾಕರ್ ಪಾಟೀಲ್ ಮಾತನಾಡಿದರು.

ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶಾಸಕ ಶರಣು ಸಲಗರ, ಮಾಜಿ ಎಂಎಲ್ಸಿ ಕೆ.ಪುಂಡಲೀಕರಾವ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ಜಿಪಂ ಮಾಜಿ ಅಧ್ಯಕ್ಷ ಗೀತಾ ಚಿದ್ರಿ, ಅಮೃತರಾವ ಚಿಮಕೋಡ, ಸಾಗರ ಖಂಡ್ರೆ, ದಿಲೀಪ ಶಿಂಧೆ, ಶಂಕರಾವ ಜಮಾದಾರ, ಜಗನ್ನಾಥ ಜಮಾದಾರ, ಗೌತಮ ನಾರಾಯಣರಾವ, ಸಂಜುಕುಮಾರ ಸೂಗುರೆ, ಮನೋಜ ಮಾಶೆಟ್ಟೆ, ರೈಸೋದ್ದಿನ್, ನಿರ್ಮಲಾ ಶಿವಣಕರ, ಸಂದೀಪ ಬುಯ್ಯೆ, ಶಿವಕುಮಾರ ಬಿರಾದಾರ, ಶ್ರೀಕಾಂತ ಕಾಂಬಳೆ, ಅಶೋಕ ಢಗಳೆ, ಚಂದ್ರಕಾAತ ಮೇತ್ರೆ, ರಾಮಣ್ಣ ಮಂಠಾಳೆ, ನಾರಾಯಣರಾವ ಭಂಗೆ, ಮಾಣಿಕ ನೆಳಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net