ಮಾ.೩೧ ರಿಂದ ನೋಂದಣಿ ಪ್ರಾರಂಭ

bkt-18-3
Published on

ಬಾಗಲಕೋಟೆ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ೫೩೩೫ ರೂ.ಗಳಂತೆ ಖರೀದಿಸಲಾಗುತ್ತಿದ್ದು, ಮಾರ್ಚ ೩೧ ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಟಾಸ್ಕಪೋರ್ಸ ಸಮಿತಿ ಅಧ್ಯಕ್ಷ ಪಿ.ಸುನೀಲ್‌ಕುಮಾರ ಹೇಳಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಲ್‌ಗೆ ೫೩೩೫ ರೂ.ಗಳಂತೆ ಪ್ರತಿ ಎಕರೆಗೆ ೪ ಕ್ವಿಂಟಲ್ ಮತ್ತು ಗರಿಷ್ಠ ಪ್ರಮಾಣ ಪ್ರತಿ ರೈತರಿಂದ ೧೫ ಕ್ವಿಟಂಲ್‌ಗೆ ರಷ್ಟು ಖರೀದಿಸಲಾಗುತ್ತದೆ. ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯವನ್ನು ಮಾ.೩೧ ರಿಂದ ಹಾಗೂ ಖರೀದಿ ಅವಧಿಯನ್ನು ಮೇ ೧೫ ವರೆಗೆ ನಿಗಽಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ ಎಂದರು.

ರೈತರು ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಅಂದರೆ ಚೆನ್ನಾಗಿ ಒಣಗಿರುವ, ಮಣ್ಣಿನಿಂದ ಬೇರ್ಪಡಿಸಲ್ಪಟ್ಟ, ಸಾಣಿಗೆಯಿಂದ ಸ್ವಚ್ಛಮಾಡಿರುವ ಗುಣಮಟ್ಟ ಗಾತ್ರದ ಕಡೆಲೆಕಾಳು ಅಂದರೆ ಚೆನ್ನಾಗಿ ಒಣಗಿರುವ, ಮಣ್ಣಿನಿಂದ ಬೇರ್ಪಡಿಸಲ್ಪಟ್ಟ, ಸಾಣಿಗೆಯಿಂದ ಸ್ವಚ್ಛಮಾಡಿರುವ ಗುಣಮಟ್ಟದ ಗಾತ್ರದ ತೇವಾಂಶ ೧೪% ರ ಒಳಗೆ ಇರುವ ಕಡಲೆಕಾಳನ್ನು ಖರೀದಿಸಲಾಗುವುದು ಎಂದರು.

ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಾಯಿಸಿಕೊಳ್ಳಲು ಆದಾರ ಕಾರ್ಡ್ ಪ್ರತಿ, ರೈತರಿಗೆ ಸಂಬಂಧಿಸಿದ ಎಫ್.ಐ.ಡಿ ಸಂಖ್ಯೆ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು. ಕಡಲೆಕಾಳು ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ಎನ್.ಐ.ಸಿ ಸಂಸ್ಥೆಯ ತಂತ್ರಾಶದೊಂದಿಗೆ ಭೂಮಿ ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿದ ನಂತರವೆ ನೋಂದಾಯಿಸಿಕೊಳ್ಳಲಾಗುತ್ತದೆ. ಒಂದು ವೇಳೆ ದರ್ಶಕದಲ್ಲಿ ಬೆಳೆ ಬೆಳೆಯದೇ ಇರುವುದು ಕಂಡು ಬಂದಲ್ಲಿ ಅಂತಹ ರೈತರು ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ, ಖರೀದಿ ಸಂಸ್ಥೆಯ ಪ್ರತಿನಿಧಿ ಸಿಪ್ರಿಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net