

ಬಾಗಲಕೋಟೆ : ಸ್ವಾತಂತ್ರ್ಯ ಭಾರತದ ಹೋರಾಟದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ ಮಹಿಳೆಯರ ಗಮನದಲ್ಲಿಟ್ಟುಕೊಂಡು ಇಂದಿನ ಮಹಿಳೆಯರಿಗೆ ಸಂಪೂರ್ಣ ಸ್ವತಂತ್ರ್ಯ ಅತ್ಯಗತ್ಯ ಎಂದು ಮಾಧುರಿ ಮುಧೋಳ ತಿಳಿಸಿದರು.
ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಟಿಐಇಐ ನ ಅಧ್ಯಕ್ಷರಾದ ಮಾಧುರಿ ಮುಧೋಳ ಅವರು ಪ್ರಾಚೀನ ಕಾಲದಿಂದಲೂ ಮಹಿಳೆ ಪ್ರತಿ ಕ್ಷೇತ್ರದಲ್ಲಿಯೂ ಅಗಾಧ ಸಾಧನೆಯನ್ನು ಮಾಡಿದ್ದನ್ನು ಗುರುತಿಸಬೇಕು. ಅಲ್ಲದೆ ಸ್ವಾತಂತ್ರ್ಯ ಭಾರತದಲ್ಲಿ ಮಹಿಳೆಯರಿಗೆ ಪ್ರತಿಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡಿ ಸಂಪೂರ್ಣ ಸ್ವತಂತ್ರ್ಯವನ್ನು ನೀಡುವುದು ಅಗತ್ಯವಿದೆ ಎಂದರು.
78ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಉಚಿತ ಕಣ್ಣಿನ ತಪಾಸನೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರಗಳನ್ನ ನಡೆಸಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡೀನ್ /ಆಡಳಿತ ಅಧಿಕಾರಿಯಾದ ಡಾ. ಶಿವಕುಮಾರ್ ಗಂಗಾಲ, ಪ್ರಾಂಶುಪಾಲರಾದ ಡಾ. ಪ್ರಹ್ಲಾದ್ ಗಂಗಾವತಿ, ಸಿ ಬಿ ಎಸ್ ಸಿ ಪ್ರಾಂಶುಪಾಲರಾದ ಸಚಿನ್ ಭಾತ್ರ, ಪಿಯು ಪ್ರಾಂಶುಪಾಲರಾದ ಕ್ಯಾಪ್ಟನ್ ಶಶಾಂಕ್ ದೀಕ್ಷಿತ್, ದೈಹಿಕ ಶಿಕ್ಷಕರಾದ ಸದಾಶಿವ ಹಂಚಿನಾಳ, ತೇಜಸ್ ಶಿಕ್ಷಣ ಸಮೂಹ ಸಂಸ್ಥೆಗಳ ಸಮಸ್ತ ಪ್ರಾಧ್ಯಾಪಕ ವರ್ಗ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.