

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಹೇಳಿದರು.
ನಗರದ ಕೌಲಪೇಟಿ, ಝಂಡಾಗಲ್ಲಿ ಭಾನುವಾರ ಪಾದಯಾತ್ರೆ ಮೂಲಕ ಭಾನುವಾರ ಮತಯಾಚನೆ ಮಾಡಿದ ವೇಳೆ ಮಾತನಾಡಿದರು.
ನಗರದ ಗುಡಿಸಲು ವಾಸಿಗಳಿಗೆ, ಕೊಳಗೇರಿ ಜನರಿಗೆ ಮೂಲಭೂಸೌಕರ್ಯ ಜೊತೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳಲಾಗುತ್ತದೆ. ಕಳೆದ ೫ ವರ್ಷಗಳಿಂದ ನಗರದಲ್ಲಿ ಅಭಿವೃದ್ದಿ ಕಂಡಿಲ್ಲ. ನಮ್ಮ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ತಮಗೆ ಮತದಾನ ಮಾಡಿ ಗೆಲ್ಲಿಸಬೇಕು ಎಂದರು.
ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಎಚ್.ವೈ.ಮೇಟಿ ಈ ಹಿಂದೆ ಸಚಿವರು, ಶಾಸಕರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿಯ ಪರ್ವ ಹರಿಸಿದ್ದಾರೆ. ಅವರಿಗೆ ಈ ಅವಕಾಶ ನೀಡಿದಲ್ಲಿ ಬಾಗಲಕೋಟೆ ನಗರ ಸಂಪೂರ್ಣ ಪ್ರಗತಿ ಕಾಣಲಿದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ ಎಂದರು.
ಯುವಕರ ಅಪಾರ ಬೆಂಬಲ ಜೊತೆಗೆ ಕಾಂಗ್ರೆಸ್ ಪಕ್ಷದ ಜಯಘೋಷಣೆ ಕೊಗಿ ಎಚ್.ವೈ.ಮೇಟಿ ಅವರನ್ನು ಸ್ವಾಗತಿಸಿದರು. ಮುಖಂಡರಾದ ನಗರ ಸಭೆ ಸದಸ್ಯೆ ಚೆನ್ನವೀರ ಅಂಗಡಿ, ಚಿಟ್ಟು ನೀಲನಾಯಕ, ಮಲ್ಲಿಕಾರ್ಜುನ ಮೇಟಿ, ಅಶೋಕ ಲಾಗಲೊಟಿ, ರಾಜು ಬೀಳಗಿ, ಮಲ್ಲು ಶಿರೂರು, ಮಲ್ಲು ಅಂಬಿಗೇರ, ನಾಗರಾಜ ಹದ್ಲಿ, ಸುನೀಲ ಬಡಿಗೇರ, ಬಸವರಾಜ ಅಂಬಿಗೇರ, ಹನುಮಂತ ರಾಕುಂಪಿ, ಶಿವು ನಂದಿಕೋಲಮಠ, ಮುತ್ತು ಜೋಳದ, ಅಂದಾನೇಪ್ಪ ಶೆಟ್ಟರ, ಮಂಜು ಮುಚಖಂಡಿ, ಆನಂದ ಜಿಗಜಿನ್ನಿ, ಅಜೇತ್ ಗಾಣೀಕರ, ರಕ್ಷಿತಾ ಈಟಿ, ಕಲ್ಪನಾ ಮೇಟಿ, ರೇಣುಕಾ ನ್ಯಾಮಗೌಡ ಇತರರು ಇದ್ದರು.