

ಬಾಗಲಕೋಟೆ: ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾಗಿದೆ. ಮಹಿಳೆಯರ ಪಾಲಿಗೆ ಶಕ್ತಿ ಯೋಜನೆ ಬಹು ದೊಡ್ಡ ಕಾರ್ಯಕ್ರಮ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಹೇಳಿದರು.
ನವನಗರದ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಪ್ರಯಾಣಿಕರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಇಂದು ಶಿಕ್ಷಣ, ಉದ್ಯೋಗ, ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿz್ದÁರೆ. ಬಡ, ಸಾಮಾನ್ಯ ಕುಟುಂಬದ ಮಹಿಳೆಯರು ಇಂದಿಗೂ ತಮ್ಮ ಜೀವನ- ಸಂಸಾರ ಭದ್ರಗೊಳಿಸಲು ಉಳಿತಾಯ ಮಾಡಲು ನಿತ್ಯವು ಸಂಕಟ ಪಡುತ್ತಾರೆ. ಅವರಿಗೆ ಆರ್ಥಿಕ ಬಲ ತುಂಬಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೊಳಿಸಿ ಎರಡು ವರ್ಷ ಸಂದಿವೆ. ಕೋಟ್ಯಂತರ ಕುಟುಂಬಗಳು ಇದರಿಂದ ಅನುಕೂಲವಾಗಿವೆ ಎಂದರು.
ಅನೇಕ ಜನ ನೆಮ್ಮದಿ, ಸಂತೋಷದ ಜೀವನ ಸಾಗಿಸುತ್ತಿz್ದÁರೇ. ಮಹಿಳೆಯರಿಗೂ ಸಮಾಜದಲ್ಲಿ ಸಮನಾದ ಆರ್ಥಿಕ ಶಕ್ತಿ ಸಿಗಬೇಕು ಎನ್ನುವ ಅಣ್ಣ ಬಸವಣ್ಣ, ಡಾ.ಅಂಬೇಡ್ಕರ ಅವರ ಆಶಯ ಸಾಕಾರಗೊಂಡಿದೆ. ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕರು ತನ್ನ ಆಡಳಿತ ಇರುವ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಶಕ್ತಿ ಯೋಜನೆ -Àಲಾನುಭವಿಗಳು ಕಾಂಗ್ರೆಸ್ ಸರ್ಕಾರ ನೆನೆಯುತ್ತಿz್ದÁರೆ ಎಂದು ತಿಳಿಸಿದರು.