ಮಹಿಳೆಯ ಎರಡು ಹಸ್ತಗಳು ಛಿದ್ರ !

bkt-20-11-a
ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಎರಡು ಕೈಗಳ ಹಸ್ತಗಳು ಹಾಗೂ ಬೆರಳುಗಳು ಕಟ್ ಆಗಿ ಇಳಕಲ್ಲ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜೇಶ್ವರಿ ಯರನಾಳ.
Published on

ಬಾಗಲಕೋಟೆ: ಹೇರ್ ಡ್ರೈ ಯರ್ ಬ್ಲಾಸ್ಟ್ ಆಗಿ ಮೃತ ಯೋಧನ ಪತ್ನಿಯ ಎರಡು ಕೈ ಹಸ್ತಗಳು ಹಾಗೂ ಬೆರಳುಗಳು ತೀವ್ರ ಹಾನಿಯಾಗಿರುವ ಘಟನೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ತಡವಾಗಿ ಬುಧವಾರ ಸಂಭವಿಸಿದೆ.

ಕೈ ಬೆರಳು ಕಟ್ ಆಗಿರುವ ಮಹಿಳೆ ಇಳಕಲ್ಲ ನಗರದ ಬಸವರಾಜೇಶ್ವರಿ ಯರನಾಳ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಹಿಳೆಯ ಎರಡು ಕೈಗಳ ಹಸ್ತದ ಅರ್ಧ ಭಾಗ ಹಾಗೂ ಎಂಟು ಬೆರಳುಗಳಿಗೆ ಕಟ್ ಹಾಗಿವೆ. ಬಲಗೈನ ಕಿರುಬೆರಳು ಹಾಗೂ ಎಡಗೈಮ ಹೆಬ್ಬೆರಳು ಮಾತ್ರ ಉಳಿದಿವೆ.

ನ. ೧೫ ರಂದು ಹೇರ್ ಡ್ರೈ ಯರ್ ಶಶಿಕಲಾ ಹಡಪದ ಹೆಸರಿನಲ್ಲಿ ಟಿಡಿಟಿಸಿಯಿಂದ ಪಾರ್ಸಲ್ ಬಂದಿತ್ತು. ಅವರು ಶಶಿಕಲಾ ಅವರಿಗೆ ಪೋನ್ ಮಾಡಿದಾಗ ತಾವು ಊರಲ್ಲಿ ಇಲ್ಲ ಎಂದು ಹೇಳಿ, ಪಕ್ಕದ ಮನೆಯ ಬಸವರಾಜೇಶ್ವರಿ ಅವರಿಗೆ ತೆಗೆದುಕೊಂಡು ಬರಲು ಹೇಳಿದ್ದಾರೆ. ಅದರಂತೆ ಇಳಕಲ್ಲ ನಗರದ ಡಿಟಿಡಿಸಿಗೆ ಹೋಗಿ ಪಾರ್ಸಲ್ ಪಡೆದುಕೊಂಡು ಮನೆಗೆ ಬಂದಿದ್ದಾರೆ. ಮರುದಿನ ನ. ೧೬ ರಂದು ಪಾರ್ಸಲ್ ಏನಿದೆ ಎಂದು ತೆಗೆದು ನೋಡಿದಾಗ ಹೇರ್ ಡ್ರೈಯರ್ ಇರುವುದು ಗೊತ್ತಾಗಿದೆ. ಚೆಕ್ ಮಾಡೋಣ ಎಂದು ಪ್ಲಗ್ ಹಾಕಿ ಸ್ವಿಚ್ ಹಾಕಿ ಆನ್ ಮಾಡಿದ್ದ ತಡ ದಿಢೀರನೆ ಬ್ಲಾಸ್ಟ್ ಆಗಿ ಜೋರಾದ ಸದ್ದು ಕೇಳಿ ಬಂದಿದೆ. ಅದನ್ನು ಹಿಡಿದಿದ್ದ ಬಸವರಾಜೇಶ್ವರಿ ಅವರ ಕೈಗಳ ಹಸ್ತಗಳು ಹಾಗೂ ಬೆರಳುಗಳು ತುಂಡಾಗಿ ಮನೆಯಲ್ಲಿ ರಕ್ತ ಚೆಲ್ಲಾಡಿದೆ.

ತಕ್ಷಣವೇ ಅವರನ್ನು ಇಳಕಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ಸೋಕೋ ಟೀಂ, ಇಲೆಕ್ಟ್ರಿಕಲ್ ಇನ್ಸಪೆಕ್ಟರ್, ಡಿಎಸ್ಪಿ, ಸಿಪಿಐ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬ್ಲಾಸ್ಟ್ ಹೇಗಾಗಿದೆ ಎಂದು ಒಂದು ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಇಲೆಕ್ಟಿçಕಲ್ ಇನ್‌ಪೆಕ್ಟರ್ ಗೆ ಎಸ್ಪಿ ಅಮರನಾಥ ರೆಡ್ಡಿ ಸೂಚಿಸಿದ್ದಾರೆ. ಹಾಗೆಯೇ ಎಫಎಸ್ ಎಲ್ ಗೂ ಕಳುಹಿಸಲು ಸೂಚಿಸಿದ್ದಾರೆ.

ಹೇರ್ ಡ್ರೆಯರ್ ಆರ್ಡರ್ ಮಾಡಿಲ್ಲವಂತೆ :

ಘಟನೆ ನಡೆದು ಮಹಿಳೆಯರ ಎರಡು ಕೈ ಬೆರಳುಗಳು ಕಳೆದುಕೊಂಡಿರುವ ಘಟನೆಯ ಬಳಿಕ ಇದೀಗ ಶಶಿಕಲಾ ಹಡಪದ ಅವರು ತಾವು ಆನ್ ಲೈನ್‌ನಲ್ಲಿ ಶಾಪಿಂಗ್ ಮಾಡಿಲ್ಲ. ಹೇರ್ ಡ್ರೈ ಯರಗೆ ಆರ್ಡರ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಶಶಿಕಲಾ ಅವರು ಹೇಳಿದ್ದರಿಂದ ಹೋಗಿ ತೆಗೆದುಕೊಂಡು ಬಂದಿದ್ದೇನೆ ಎಂದು ಬಸವರಾಜೇಶ್ವರಿ ಹೇಳುತ್ತಾರೆ. ಆದರೆ, ನಾನು ಆನ್ ಲೈನ್ ಖರೀದಿ ಮಾಡಿರಲಿಲ್ಲ. ನನ್ನ ಹೆಸರಿಗೆ ಹೇಗೆ ಬಂದು ಎಂದು ಗೊತ್ತಾಗುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ಎಲ್ಲರ ಮೊಬೈಲ್ ಸಿಡಿಆರ್ ಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಎಫಎಸ್ ಎಲ್ ವರದಿ ಬರಲಿ. ಎಲ್ಲವನ್ನು ಪರಿಶೀಲಿಸಿ, ಸತ್ಯ ಏನು ಎನ್ನುವ ನಿಟ್ಟಿನಲ್ಲಿ ವೈಜ್ಞಾನಿಕ ತನಿಖೆಯ ಅಗತ್ಯ ಇದೆ. ಸದ್ಯಕ್ಕೆ ಇಳಕಲ್ಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇರ್ ಡ್ರೈ ಮೇಡ್ ಇನ್ ಚೈನಾ ಇದ್ದು, ಕೀಮೆಯ್ ಕಂಪನಿಯದ್ದು ಎಂದು ಕಂಡು ಬಂದ ಹಿನ್ನಲೆಯಲ್ಲಿ ಕಂಪನಿಯ ವಿರುದ್ಧವೂ ಎಫಐಆರ್ ಮಾಡಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net