ಮಹಿಳೆಗೆ ಚುಡಾಯಿಸಿದ ಹಿನ್ನೆಲೆ, ಎರಡು ಕುಟುಂಬಗಳ ಮಧ್ಯೆ ಗಲಾಟೆ,ಹಲವರಿಗೆ ಗಾಯ.

WhatsApp Image 2024-08-30 at 2.26.21 PM
Published on

ಕಲಬುರಗಿ: ಮಹಿಳೆಯ ಕಾಲಿಗೆ ಕಲ್ಲಿನಿಂದ ಹೊಡೆದು ಚುಡಾಯಿಸಿದ ಪರಿಣಾಮವಾಗಿ ಕಟ್ಟಿಗೆ ಹಾಗೂ ಕಲ್ಲುಗಳಿಂದ ಎರಡು ಕುಟುಂಬಗಳ ನಡುವೆ ಲಾಟೆ ನಡೆದಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಕೋಗನೂರ ಗ್ರಾಮದಲ್ಲಿ ನಡೆದಿದೆ.

ಅಫಜಲಪುರ ತಾಲ್ಲೂಕಿನ ಕೋಗನೂರ ಗ್ರಾಮದ ಗುಂಡಪ್ಪಾ ಎಂಬುವವರ ಕುಟುಂಬಕ್ಕೆ ಸೇರಿದ ಯುವಕನಿಂದ ಅದೇ ಗ್ರಾಮದ ಮಾರುತಿ ಎಂಬುವವರ ಕುಟುಂಬದ ಮಹಿಳೆಯ ಕಾಲಿಗೆ ಕಲ್ಲಿನಿಂದ ಹೊಡೆದು ಕಿಟ್ಲೆ ಮಾಡಿ ಚುಡಾಯಿಸಿದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಎರಡು ಕುಟುಂಬಗಳ ಮಧ್ಯೆ ನಡೆದಿರುವ ಗಲಾಟೆಯನ್ನು ಸರಿಪಡಿಸಲು ರಾಜೀಗಾಗಿ ಪಂಚಾಯಿತಿ ನಡೆಸುತ್ತಿದ್ದವು, ಪಂಚಾಯಿತಿ ನಡೆಸುವಾಗಲೂ ಮತ್ತೆ ಗಲಾಟೆ ನಡೆದಿದ್ದು, ಗಲಾಟೆ ಮಧ್ಯದಲ್ಲಿ ಕೈಗೆ ಸಿಕ್ಕ ಕೊಟ್ಟಿಗೆಯಿಂದ ಹೊಡೆದಾಡುಕೊಂಡಿದ್ದಾರೆ.

ಇನ್ನೂ ಗಲಾಟೆಯಲ್ಲಿ ಎರಡು ಕುಟುಂಬಗಳ ಸದಸ್ಯರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಎರಡು ಕುಟುಂಬಗಳಿಂದ ರೇವೂರ್ ಪೋಲಿಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net