ಮಹಿಳೆ ಶ್ರಮಜೀವಿಯಾಗಿದ್ದಾಳೆ

bkt-23-3
ಮುಧೋಳ ರನ್ನ ಪ್ರತಿಷ್ಠಾನದ ಸದಸ್ಯೆ ಪ್ರೊ. ಸುಲೋಚನಾ ಜವಳಗಿ ಮಾತನಾಡಿದರು.
Published on

ಬಾಗಲಕೋಟೆ: ಕುಟುಂಬವನ್ನು ಮುನ್ನಡೆಸುವ ಮಹಿಳೆಗೆ ಬದುಕಿನಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಶ್ರಮಜೀವಾಗಿ, ಸಮಾಜಜೀವಿಯಾಗಿ ಜೀವನ ಸಾಗಿಸುತ್ತಾಳೆ ಎಂದು ಮುಧೋಳ ರನ್ನ ಪ್ರತಿಷ್ಠಾನದ ಸದಸ್ಯೆ ಪ್ರೊ. ಸುಲೋಚನಾ ಜವಳಗಿ ಹೇಳಿದರು.

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ ತಾಲೂಕಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಭಾನುವಾರ ನಡೆದ ವರ್ತಮಾನದಲ್ಲಿ ಮಹಿಳಾ ಪ್ರಾತಿನಿಧ್ಯ ವಿಷಯ ಕುರಿತ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಕ್ಷೇತ್ರದಲ್ಲಿ ವೀರ, ಽÃರ ಮಹಿಳೆಯರು ಇದ್ದಾರೆ. ಮಹಿಳೆಯರಿಗೆ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಂತು ಬದುಕುತ್ತಾಳೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಸಿಗುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಸಾಹಸ ಮಾಡದೇ ಕ್ಷೇತ್ರ ಇಲ್ಲ ಎನ್ನುವಂತಾಗಿದೆ. ರಾಜಕೀಯ ಇಂದು ಬಹಳಷ್ಟು ಹೊಲಸು ಆಗುತ್ತಿದೆ ಈ ಕ್ಷೇತ್ರವನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಡಾ.ಅನುಪಮಾ ಕುಮಟಗಿ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಪ್ರಧಾನಮಂತ್ರಿ, ರಾಷ್ಟçಪತಿ, ಮುಖ್ಯಮಂತ್ರಿ, ವಿತ್ತ ಸಚಿವೆ ಸ್ಥಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆ ದಾಪುಗಾಲು ಹಾಕಿರುವುದು ಇನ್ನುಳಿದ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಬಸಮ್ಮ ನರಸಾಪೂರ ಸಾಹಿತ್ಯ ಕ್ಷೇತ್ರದ ಸಾಧನೆ ಕುರಿತು, ದಾಕ್ಷಾಯಣಿ ಮಂಡಿ ಗ್ರಾಮೀಣ ಮಹಿಳಾ ಸಾಧನೆ ಎಂಬ ವಿಷಯ ಕುರಿತು ವಿಷಯ ಮಂಡನೆ ಮಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಶಶಿಕಲಾ ಮರಿಬಾಶೆಟ್ಟಿ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net