ಮಹಿಳೆ ಕೊಲೆಗೈದ ಐವರ ಬಂಧನ

AREST
Published on

ಬೆಳಗಾವಿ: ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸವದತ್ತಿ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಗ್ರಾಮದ ದಿವಾನಸಾಬ ಕಗದಾಳ (27), ಹಜರತ ಕಗದಾಳ (25), ರಫೀಕ್ ಕಗದಾಳ (23), ಖಾಜಿಸಾಬ ಕಗದಾಳ (65) ಹಾಗೂ ಬಿಬಿಜಾನ ಕಗದಾಳ (50) ಬಂಧಿತರು.

ಘಟನೆ ವಿವರ: ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ಮೇ 25ರಂದು ದಾವಲಬಿ ಕಗದಾಳ (25) ಅವಳನ್ನು ಪತಿಯೇ ಕೊಲೆಗೈದು ಗ್ರಾಮದ ಕೃಷಿ ಜಮೀನಿನಲ್ಲಿ ಎಸೆದಿದ್ದನು. ಮಹಿಳೆ ಕಾಣೆಯಾಗಿದ್ದಾಳೆ ಎಂದು ಮೇ 28ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪಾಲಕರು ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಮಹಿಳೆ ಗುರುತು ಪತ್ತೆ ಹಚ್ಚಿದ ಬಳಿಕ ಪತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಭಾಗಿಯಾದ ಐವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net