ಮಹಿಳಾ ಸಬಲೀಕರಣವು ಭಾರತದ ಪ್ರಗತಿ

a2549be3-af9c-4b7b-bbf2-2bb86fa241cf
Published on

ಬಾಗಲಕೋಟೆ: ಮಹಿಳಾ ಸಬಲೀಕರಣದಿಂದ ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ವೇಗದೊರೆಯಲಿದ್ದು, ಮನೆಯಿಂದಲೇ ಮಹಿಳೆಯ ಸಬಲೀಕರಣವಾಗಲಿ ಎಂದು ನಗರದ ಖ್ಯಾತ ಸ್ತೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ. ಅನಸೂಯಾ ಕೆರೂಡಿ ಹೇಳಿದರು.

ನಗರದ ಬಿ.ವಿ.ವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲವು ಸೋಮವಾರ ನೂತನ ಸಭಾಂಗಣದಲ್ಲಿ ಹಮ್ಮಿಕೊಂಡ 2023-25 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ, 13 ನೇ ಕದಳಿ ಶ್ರೀ ಸಂಚಿಕೆ ಬಿಡುಗಡೆ ಹಾಗೂ ಬಿ.ಎ.,ಬಿ.ಎಸ್ಸಿ. ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾಥಿನಿಯರ ಬಿಳ್ಕೋಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಹಿಳಾ ಸಬಲೀಕರಣ ಹೆಚ್ಚು ಅಂತರ್ಗತ ಮತ್ತು ಸಮೃದ್ಧ ಸಮಾಜವನ್ನು ಪೋಷಿಸುತ್ತದೆ, ಇಂದು ಭಾರತ ಅಭಿವೃದ್ಧಿ ಹೊಂದಿದ ರಾಷ್ಟçವಾಗುತ್ತಿದೆ, ನಮ್ಮ ದೇಶ, ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ಕ್ರೀಡಾ ಕ್ಷೇತ್ರ, ವಿಜ್ಞಾನ ಕ್ಷೇತ್ರ, ಸಂಗೀತ ಕ್ಷೇತ್ರ, ರಾಜಕೀಯ ಕ್ಷೇತ್ರ ಸೇರಿದಂತೆ ಅಪ್ರತಿಮ ಸಾಧಕಿಯರನ್ನು ಹೊಂದಿದ ಹೆಗ್ಗಳಿಕೆ ಭಾರತಕ್ಕಿದೆ, ಮೊದಲಿಗರಾಗಿ ಸೇವೆ ಸಲ್ಲಿದಿದ ಮಹಿಳಾ ಸಾಧಕಿಯರನ್ನು ಹೊಂದಿದ ಭಾರತ ಧನ್ಯ, ನಾವು ಈದಿರದ ಕಂಡರಿಯದ ಎಷ್ಟೋ ಸಾಧಕಿಯರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ, ಇವರೆಲ್ಲರೂ ಭವಿಷ್ಯದ ಸಾಧನೆಯ ಹಾದಿಯಲ್ಲಿರುವ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ ಅವರು ಮಾತನಾಡಿ ಮಹಿಳೆ ಶಕ್ತಿ ಸ್ವರೂಪಿಣಿ, ಕುಟುಂಬ ನಿರ್ವಹಣೆ ಜೊತಗೆ ಸಾಧನೆ ಶೀಖರವನ್ನು ಮಹಿಳೆ ಏರಿದ್ದಾಳೆ, ಪ್ರತಿಯೊಬ್ಬ ಮಹಿಳೆಗೆ ಆತ್ಮಸ್ಥೈರ್ಯ ತುಂಬುವುದು ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹದಿಮೂರನೇ ಕದಳಿಶ್ರೀ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು. ರಾಜ್ಯಪಾಲ ಪ್ರಶಸ್ತಿಯನ್ನು ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿನಿಯರಾದ ಮಧು ಹಿರೇಲಿಂಗಣ್ಣವರ್ ಹಾಗೂ ಜ್ಯೋತಿ ಅಮನ್ನವರ್ ರವರನ್ನು ಹಾಗೂ ವಿಶ್ವವಿದ್ಯಾನಿಲಯದ 'ಬ್ಲೂ' `ಗಳನ್ನು ಸನ್ಮಾನಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪಾರಿತೋಷಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕು. ಮೆಘನಾ ಮಲಘಾಣ ಸಂಗಡಿಗರಿಂದ ಪ್ರಾರ್ಥನೆ ಜರುಗಿತು, ಐಕ್ಯೂಎಸಿ ಸಂಯೋಜಕಿ ಪಿ. ಕೆ. ಚೌಗುಲಾ ಸ್ವಾಗತಿಸಿದರು, ಪಲ್ಲವಿ ಪಾತ್ರೋಟ ಪರಿಚಯಿಸಿದರು, ವಂದನಾ ಸತ್ತಿಗೇರಿ ಹಾಗೂ ವಂದನಾ ಕಡಪಟ್ಟಿ ಕಾರ್ಯಕ್ರಮ ನಿರೂಪಿಸಿದರು, ಕು.ಪ್ರಿಯಾಂಕ ಚವ್ಹಾಣ ವಂದಿಸಿದರು, ಎ.ವಿ. ಕುಂದರಗಿಮಠ ವಾರ್ಷಿಕ ವರದಿ ಓದಿದರು, ಡಾ. ಎಂ. ವಿ. ಬಾಜಪ್ಪನವರ ಕ್ರೀಡಾ ವರದಿ ವಾಚಿಸಿದರು, ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net