ಮಹಿಳಾ ಉದ್ಯಮಿದಾರರಿಗೆ ಸ್ಪೂರ್ತಿಯ ಸೆಲೆ

bkt-25-3
Published on

ಬಾಗಲಕೋಟೆ:  ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್‍ಎಲ್‍ಎಮ್ ಯೋಜನೆಯು ಸ್ಪೂರ್ತಿಯ ಸೆಲೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು.

ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಎನ್‍ಆರ್‍ಎಲ್‍ಎಮ್ ಯೋಜನೆಯಡಿ ಮಹಿಳಾ ಉದ್ಯಮಿದಾರರ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ತಮ್ಮಲ್ಲಿರುವ ಶಕ್ತಿಯನ್ನು ಅರ್ಥಮಾಡಿಕೊಂಡು ಅದನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ದೇಶ, ರಾಜ್ಯ ಗ್ರಾಮ ಮತ್ತು ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಲು ಎನ್‍ಆರ್ ಎಲ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಂದ ಈಗಾಗಲೇ 5 ಮೊಬೈಲ್ ಕ್ಯಾಂಟೀನ್ ತೆಗೆಯಲಾಗಿದ್ದು ಎಲ್ಲವೂ ಚೆನ್ನಾಗಿ ನಡೆಯುತ್ತಿವೆ, ಜಮಖಂಡಿಯಲ್ಲಿ ಸೂಪರ್ ಮಾರ್ಕೆಟ್ ತೆಗೆಯಾಗಿದ್ದು ಇತರ ಪ್ರಮುಖ ಸ್ಥಳಗಳಲ್ಲಿ ಸೂಪರ ಮಾರ್ಕೇಟ್ ತೆರೆಯಲು ಸ್ಥಳ ಗುರುತಿಸಲಾಗುತ್ತಿದೆ. ಶೀಘ್ರದಲ್ಲಿ ಪ್ರಾರಂಬಿಸಲಾಗುವುದು ಅಲ್ಲದೇ ಈ ಯೋಜನೆಯಡಿ ಅಕ್ಕಾ ಕೆಫೆ ತೆರೆಯುವ ಉದ್ದೇಶವಿದ್ದು ಮುಂದಿನ 15 ದಿನಗಳಲ್ಲಿ ಪ್ರಾರಂಬಿಸಲಾಗುವುದು. ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕ್ಯಾಂಟೀನ್ ತೆರೆಯುಲು ಕ್ರಮ ಕೈಗೊಳ್ಳಲಾಗುತ್ತಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್ ವಾಯ್ ಬಸರಿಗಿಡದ ಮಾತನಾಡಿ ಎನ್ ಆರ್ ಎಲ್ ಎಮ್ ಯೋಜನೆಯ ಉದ್ದೇಶ ಪ್ರತಿ ಕುಟುಂಬದ ಮಹಿಳೆ ಆರ್ಥಿಕ ಸಫಲತೆ ಸಾಧಿಸಿ ತನ್ನ ಕುಟುಂಬದ ನಿರ್ವಣೆ ಮಾಡಿಕೊಳ್ಳಬೇಕು ಎಂಬುದಾಗಿದ್ದು ಇದರ ಸದುಪಯೋಗ ಎಲ್ಲಡೆ ಆಗಬೇಕು ಎಂದು ಹೇಳಿದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿಸದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಅವರು ಉದ್ಯಮಶೀಲತೆ ಅಭಿವೃದ್ಧಿ ಹಾಗೂ ಉದ್ಯಮಿ ನೊಂದಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ವಿಜಯ ಕಂಠಿ ಉದ್ಯಮ ನಿಯಮಬದ್ದಗೊಳಿಸುವಿಕೆ ಹಾಗೂ ಉತ್ಪನ್ನಗಳ ಗುಣಮಟ್ಟತೆ, ಅಗ್ರೋ ಮಾರ್ಕೇಟಿಂಗ್ ಸಮಾಲೋಚಕ ಅಮರ ಕಟ್ಟಿಮನಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಬ್ರ್ಯಾಂಡಿಗ್ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಉದ್ಯಮಿದಾರರಾದ ಗೀತಾ ಕರಬಸಯ್ಯ ಹಂಪಿಹೊಳಿಮಠ, ಶಿವಕ್ಕ ಗೌಡರ, ಸುಜಾತಾ ಪಾಟೀಲ, ಲಿಂಗತ್ವ ಅಲ್ಪಸಂಖ್ಯಾತ ಆನಂದ ಭಜಂತ್ರ, ಶೋಭಾ ಬಿಳ್ಳೂರು, ಮಲ್ಲಮ್ಮ ಮಠಪತಿ, ಕಸ್ತೂರಿ ರಾಠೋಡ, ಹಾಸಂಬಿ ಪಕಾಲಿ, ದಾನಮ್ಮ ಮಂಗಸೂಲಿ ತಮ್ಮ ಅನುಭವದ ಅನಿಸಿಕೆಗಳನ್ನು ಹಂಚಿಕೊಂಡರು.

ನಂತರ ಮಹಿಳಾ ಉದ್ಯಮಿದಾರರಿಗೆ ಪ್ರಮಣಾ ಪತ್ರಗಳನ್ನು ವಿತರಿಸಲಾಯಿತು. ಖ ಆರ್ ಡಿ ಎ ಯೋಜನಾ ನಿರ್ದೇಶಕ ಡಾ. ಪುನಿತ್ ಬಿ.ಆರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಭಿಮಪ್ಪ ತಳವಾರ ಸ್ವಾಗತಿಸಿದರು. ಜಿಲ್ಲಾ ವ್ಯವಸ್ಥಾಪಕ ಭಿಮಾನಂದ ಶೆಟ್ಟರ ವಂದನಾರ್ಪಣೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net