ಮಹಾಶಿವರಾತ್ರಿಗೆ ಕೋಟೆನಾಡು ಸಜ್ಜು

bkt-7-1a
ಬಾಗಲಕೋಟೆ
Published on

ಬಾಗಲಕೋಟೆ: ಮಹಾಶಿವರಾತ್ರಿ ಸಂಭ್ರಮಕ್ಕೆ ಕೋಟೆನಾಡು ಸಜ್ಜುಗೊಂಡಿದೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಮುಖ ಪ್ರದೇಶಗಳಲ್ಲಿರುವ ಶಿವಾಲಯಗಳಲ್ಲಿ ಶಿವರಾತ್ರಿದಿನದಂದು ವಿಶೇಷ ಪೂಜೆ, ಆರಾಧಾನೆಗೆ ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕೋಟೆನಾಡಲ್ಲಿ ಐತಿಹಾಸಿನ ದೇವಾಲಯಗಳಾದ ಮಹಾಕೋಟೇಶ್ವರ, ಕೂಡಲಸಂಗಮ, ಚಿಕ್ಕ ಸಂಗಮ, ಶಿವಯೋಗಿ ಮಂದಿರ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಇಂದು ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಉಪವಾಸ ವೃತಾರ್ಚಾನೆ ಮಾಡಿ ಶಿವನನ್ನು ಪೂಜೆಸಲಾಗುತ್ತದೆ. ಬಿಲ್ವ ಪತ್ರೆ ಸಮರ್ಪಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಲಾಗುತ್ತದೆ. ಇಂದು ಮನೆ ಮನೆಗಳಲ್ಲಿ ಲಯಕರ್ತನ ಜಪ ನಡೆಯಲಿದೆ.

ಸತ್ಯ ಶಿವಂ ಸುಂದರಂ ದೇವಸ್ಥಾನ
ನಗರದ ಕಲಾದಗಿ ರಸ್ತೆಯಲ್ಲಿರುವ ಮುಚಖಂಡಿ ಕ್ರಾಸ್ ಸಮೀಪದ ಶಿವಾಲಯ ಸತ್ಯಂ ಶಿವಂ ಸುಂದರಂ ನಗರದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ಒಂದಾಗಿದೆೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಿತ್ಯವು ಭಕ್ತರು ಆಗಮಿಸುವ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿ ದಿನದಂದು ದೇವಾಲಯ ಜನ ಸಾಗರವೆ ಹರಿದು ಬರುತ್ತವೆ. ಸಂಜೆ ಅದ್ದೂರಿಯಾಗಿ ಜಾತ್ರೆ ಜರುಗಲಿದೆ.

ಬೆಳಗ್ಗೆ ಅಭಿಷೇಕ, ರುದ್ರಾಭಿಷೇಕ, ಸಹಸ್ರ ಬೀಲ್ವಾರ್ಚನೆ ನೆರವೇರಲಿದೆ. ಸಂಜೆ ಭಕ್ತರು ವಿವಿಧ ಹರಿಕೆ ತಿರಿಸಲಿದ್ದಾರೆ. ರಾತ್ರಿ ಶಿವರಾತ್ರಿ ಜಾಗರಣೆ ಹಮ್ಮಿಕೊಳ್ಳಲಾಗಿದ್ದು, ಶಿವನ ನಾಮ ಸ್ಮರಣೆ ಮಾಡುತ್ತಾ ವೇದ ಘೋಷಗಳ ನಡುವೆ ಶಿವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಾ.೯ ರಂದು ಬೆಳಗ್ಗೆ ವಿಶೇಷ ಪೂಜೆ ನಂತರ ಶಿವರಾತ್ರಿಗೆ ಮಂಗಳ ಹಾಡಲಾಗುತ್ತದೆ.

ಸೌರಾಷ್ಟ್ರ ಸೋಮಲಿಂಗೇಶ್ವರ ಮಂದಿರ
ನವನಗರದ ಸೆಕ್ಟರ ೨೫ ರಲ್ಲಿರುವ ಸೌರಾಷ್ಟ್ರ ಸೋಮಲಿಂಗೇಶ್ವರ ಶಿವಾಲಯ ಈಚೆಗಿನ ದಿನಗಳಲ್ಲಿ ಆಕರ್ಷಿಸುತ್ತಿದೆ. ಮಹಾ ಶಿವನೇ ಇಲ್ಲಿನ ಬಂದು ನೆಲಿಸಿದ್ದಾನೆ ಎನ್ನುವ ಭಾವ ದೇವಸ್ಥಾನದಲ್ಲಿ ಹೊರ ಹೊಮ್ಮುತ್ತದೆ. ಶಿವರಾತ್ರಿ ದಿನ ಬೆಳಗ್ಗೆಯಿಂದ ವಿವಿಧ ವಿವಿಧ ಪೂಜೆ ಜರುಗಲಿವೆ. ವಿವಿಧ ಮಠಾಽಶರು, ಪಂಡಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯ, ಮಹಾರುದ್ರಾಭಿಷೇಕ ನಡೆಯಲಿದೆ.

ಮೆಡಿಕಲ್ ಕಾಲೇಜಿನ ಶಿವಾಲಯದಲ್ಲಿ ಮಹಾಶಿವರಾತ್ರಿ
ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಶಿವಾಲಯದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ.

ಬೆಳಗ್ಗೆ ೫ ಗಂಟೆಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ನಂತರ ೧೧ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಬಿವಿವಿ ಸಂಘದ ಅಕ್ಕನ ಬಳಗದ ಸದಸ್ಯರಿಂದ ಶ್ರೀರುದ್ರ ಪಾರಾಯಣ ನಡೆಯಲಿದೆ. ಸಂಜೆ ೬.೦೦ ಗಂಟೆಗೆ ಪ್ರಸಾದ ವಿತರಣೆ ಜರುಗಲಿದೆ.
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ
ಹಳೇ ನಗರದ ಎಂ.ಜಿ.ರಸ್ತೆಯಲ್ಲಿ ಶಿವನ ಸ್ವರೂಪಿಯಾದ ಶ್ರೀಶೈಲ ಮಲ್ಲಿಕಾರ್ಜುನನ್ನು ಸ್ಥಾಪಿಸಲಾಗಿದೆ. ಸ್ವಾಮೀ ಮಲ್ಲಿಕಾರ್ಜುನನಿಗೆ ಶಿವರಾತ್ರಿ ದಿನದಂದು ವಿಶೇಷ ಪೂಜೆ ಜರುಗಲಿದೆ.

ಬೆಳಗ್ಗೆ ಅಮೃತ ಮೂಹೂರ್ತದಲ್ಲಿ ರುದ್ರಾಭಿಷೇಕ ನಡೆಯಲಿದೆ. ಸಂಜೆ ಬಿಲ್ವಾರ್ಚನೆ ಪೂಜಾ ಕೈಂಕರ್ಯಗಳು ನಡೆಯಲಿವೆ. ವಿಶೇಷ ಅಲಂಕಾರದೊಂದಿಗೆ ಮಲ್ಲಿಕಾರ್ಜನ ದರ್ಶನ ನೀಡಲಿದ್ದಾನೆ. ರಾತ್ರಿ ಜಾಗರಣೆ, ಬೆಳಗ್ಗೆ ರುದ್ರಾಭಿಷೇಕದ ನಂತರ ಬುತ್ತಿ ಪೂಜೆ ನಡೆಯಲಿದೆ.

ಆನಂದೇಶ್ವರ ದೇವಸ್ಥಾನ..
ಹಳೇ ನಗರದ ಟೀಕಿನಮಠ ಹತ್ತಿರ ಇರುವ ವಿಷ್ಣು ಆನಂದೇಶ್ವರ ದೇವಸ್ಥಾನ ನಗರದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಪೇಶ್ವೆಗಳ ಆಡಳಿತ ಅವಽಯಲ್ಲಿ ನಿರ್ಮಾಣವಾಗಿರವ ಆನಂದೇಶ್ವರ ದೇವಸ್ಥಾನ ಪುರತಾನ ಶಿಲ್ಪಗಳಲ್ಲಿ ಇದೆ. ಇಲ್ಲಿ ಆನಂದಮಯವಾಗಿ ಕಂಗೂಳಿಸುವ ಶಿವನು, ಶಾಂತಮಯವಾಗಿ ನೆಲೆಸಿದ್ದಾನೆ. ಶಿವರಾತ್ರಿ ದಿನದಂದು ವಿಶೇಷವಾಗಿ ಪೂಜೆ, ಮಂತ್ರಘೋಷಗಳು ಮೊಳಗುತ್ತವೆ ಇಲ್ಲಿ. ಹಳೇ ನಗರದ ಅಸಂಖ್ಯಾತ ಭಕ್ತರು ಆರಾಧ್ಯ ದೈವವಾಗಿದ್ದಾನೆ. ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ಜರುಗಲಿವೆ.

ಕೇದಾರೇಶ್ವರ ದೇಗುಲ:
ಹಳೇ ಬಾಗಲಕೋಟೆ ಕಿಲ್ಲಾ ಗಲ್ಲಿಯಲ್ಲಿರುವ ಕೇದಾರೇಶ್ವರ ದೇವಸ್ಥಾನದಲ್ಲಿ ಶಿವಾರಾತ್ರಿ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗುತ್ತವೆ. ರುದ್ರಾಭೀಷೇಕ, ರುದ್ರಪಠಣ ನಡೆಯಲಿದೆ. ಹರ ಹರ ಮಹಾದೇವ ಎನ್ನುವ ಭಕ್ತಿಯ ಘೋಷಣೆ ಮೊಳಗಲಿದೆ. ಶಿವ ಜಾಗರಣೆ ನಡೆಯಲಿದೆ.
ಇಷ್ಟೇ ಅಲ್ಲದೆ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ನಡೆಯಲಿದೆ. ಶಿವನಾಮ ಜಪಿಸಲು ಭಕ್ತರು ಬೆಳ್ಳಂ ಬೆಳಗ್ಗೆಯಿಂದಲೇ ದೇವಸ್ಥಾನದ ಕಡೆಗೆ ಹೆಜ್ಜೆಹಾಕಲಿದ್ದಾರೆ. ಜೊತೆಗೆ ರಾತ್ರಿ ಜಾಗರಣೆ ನಡೆಸಲಿದ್ದಾರೆ. ಇದಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ ಸಾಕಷ್ಟು ಭಕ್ತರು ಶಿವರಾತ್ರಿ ಅಂಗವಾಗಿ ನಿರಾಹಾರ ವೃತ ನಡೆಸಲಿದ್ದಾರೆ.

ವಿದ್ಯಾಗಿರಿ ಮಲ್ಲಿಕಾರ್ಜುನ ದೇವಸ್ಥಾನ
ಬಾಗಲಕೋಟೆ: ನಗರದ ವಿದ್ಯಾಗಿರಿ ಬಡಾವಣೆಯಲ್ಲಿನ ೨೨ ನೇ ಅಡ್ಡ ರಸ್ತೆಯಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಮಾ.೮ ರಂದು ಬೆಳಗ್ಗೆ ೬ ಗಂಟೆಗೆ ಶಿವಲಿಂಗ ಮಹಾಪೂಜೆ, ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜರುಗುವು. ಮಾ.೯ ರಂದು ಮಧ್ಯಾಹ್ನ ೧ ಗಂಟೆಗೆ ಅನ್ನಪ್ರಸಾದ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net