ಮಹಾಲಿಂಗಪುರದಲ್ಲಿ ಮತ್ತೆ ಭ್ರೂಣ ಹತ್ಯೆ..!

ಗರ್ಭಪಾತ ಮಾಡಿರುವ ಆರೋಪದ ಹಿನ್ನಲೆ ಬಾಗಲಕೋಟೆ ಜಿಲ್ಲಾ ಮಹಾಲಿಂಗಪುರ ಪಟ್ಟಣದ ಪಾಟೀಲ ಆಸ್ಪತ್ರೆಯ ಮೇಲೆ ದಾಳಿ ಮಾಡಿರುವ ಡಿಎಚ್‌ಒ ನೇತೃತ್ವದ ಅಽಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಸೀಜ್ ಮಾಡಿರುವುದು.
bkt-06-12
ಗರ್ಭಪಾತ ಮಾಡಿರುವ ಆರೋಪದ ಹಿನ್ನಲೆ ಬಾಗಲಕೋಟೆ ಜಿಲ್ಲಾ ಮಹಾಲಿಂಗಪುರ ಪಟ್ಟಣದ ಪಾಟೀಲ ಆಸ್ಪತ್ರೆಯ ಮೇಲೆ ದಾಳಿ ಮಾಡಿರುವ ಡಿಎಚ್‌ಒ ನೇತೃತ್ವದ ಅಽಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಸೀಜ್ ಮಾಡಿರುವುದು.
Published on

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಇತ್ತೀಚಿಗೆ ನಡೆದಿದ್ದ ಗರ್ಭಪಾತ ಹಾಗೂ ಮಹಿಳೆ ಸಾವು ಪ್ರಕರಣ ಇನ್ನೂ ಹಸಿಹಸಿಯಾಗಿರುವಾಗಲೇ ಇದೀಗ ಅದೇ ಪಟ್ಟಣದಲ್ಲಿ ಮತ್ತೊಂದು ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಮಹಾಲಿಂಗಪುರದ ಪಾಟೀಲ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆಸಲಾಗಿದೆ ಎನ್ನುವುದ ಮಾಹಿತಿ ಆಧರಿಸಿ ಗುರುವಾರ ರಾತ್ರಿ ಆರೋಗ್ಯ ಇಲಾಖೆ ಅಽಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಲ್ಲದೇ ಶುಕ್ರವಾರ ಆಸ್ಪತ್ರೆಯಲ್ಲಿ ಇರುವ ಹೆರಿಗೆ ಕೊಠಡಿ, ಆಪರೇಶನ್ ಕೊಠಡಿ, ಸ್ಕ್ಯಾನಿಂಗ್ ಸೆಂಟರ್ ಸೀಜೆ ಮಾಡಿರುವುದನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಸುವರ್ಣ ಕುಲಕರ್ಣಿ ತಿಳಿಸಿದ್ದಾರೆ.

ಇನ್ನು ಗರ್ಭಪಾತಕ್ಕೆ ಒಳಗಾಗಿದ್ದಾರೆ ಎನ್ನಲಾದ ರನ್ನಬೆಳಗಲಿ ಗ್ರಾಮದ ಸಂತ್ರಸೆöಯ ಮನೆಗೂ ಭೇಟಿ ನೀಡಿದ ಆರೋಗ್ಯ ಇಲಾಖೆ ಅಽಕಾರಿಗಳು ಹಾಗೂ ಸಿಬ್ಬಂದಿ ಸಂತ್ರಸ್ತ ಮಹಿಳೆಯ ಪತಿಯಿಂದ ಎಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಮಹಾಲಿಂಗಪುರ ಪಟ್ಟಣದಲ್ಲಿ ಬೇರೊಂದು ಆಸ್ಪತ್ರೆಯಲ್ಲಿ ಭ್ರೂಣ ಪತ್ತೆಯ ಸ್ಕ್ಯಾನಿಂಗ್ ಮಾಡಿಸಿದ್ದು, ಶುಕ್ರವಾರ ಸಂಜೆ ಆಸ್ಪತ್ರೆಗೂ ಭೇಟಿ ನೀಡಿರುವ ಅಽಕಾರಿಗಳು ಅಲ್ಲಿನ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಮಹಾಲಿಂಗಪುರದಲ್ಲಿ ಪಾಟೀಲ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಗರ್ಭಪಾತ ಪ್ರಕರಣ ವಿಚಿತ್ರವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಗರ್ಭಪಾತಕ್ಕೆ ಒಳಗಾಗಿರುವ ಸಂತ್ರಸ್ತ ಮಹಿಳೆಗೆ ಈ ಮೊದಲು ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಗರ್ಭಿಣಿ ಆದಾಗ ಮಹಾಲಿಂಗಪುರದ ಬೇರೊಂದು ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಪರೀಕ್ಷೆ ಮಾಡಿಸಿದಾಗ ನಾಲ್ಕನೆಯದ್ದು ಸಹ ಹೆಣ್ಣು ಮಗು ಎಂದು ತಿಳಿದು ಬಂದಿದೆ. ಆಗ ಪಾಟೀಲ ಆಸ್ಪತ್ರೆಗೆ ಬಂದು ಗರ್ಭಪಾತ ಮಾಡಿಸಿಕೊಂಡಿದ್ದರಂತೆ. ಆದರೆ, ಆ ಭ್ರೂಣ ಹೆಣ್ಣು ಅಲ್ಲ, ಗಂಡು ಮಗುವಿನದ್ದು ಎಂದು ತಿಳಿದು ಬಂದಿದೆಯಂತೆ.

ಮಹಾಲಿಂಗಪುರದಲ್ಲಿ ಪಾಟೀಲ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆದ ಖಚಿತ ಮಾಹಿತಿ ಮೇರಿಗೆ ಆರೋಗ್ಯ ಇಲಾಖೆ ಅಽಕಾರಿಗಳು ದಾಳಿ ನಡೆಸಿ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಕೋಣೆ ಸೀಜ್ ಮಾಡಿರುವುದು ಳ್ಳೆಯ ಬೆಳವಣಿಗೆ. ಈ ಬಗ್ಗೆ ಡಿಎಚ್‌ಒ ಸುವರ್ಣ ಕುಲಕರ್ಣಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಭ್ರೂಣ ಪತ್ತೆ ಹಾಗೂ ಹತ್ಯೆ ನಡೆದಿರುವುದ ಮೇಲ್ನೋಟಕ್ಕೆ ಕಂಡು ಬಂದಿದ್ದು ತ್ವರಿತವಾಗಿ ಪಿಸಿಪಿಎನ್‌ಡಿಟಿ ಕಾಯ್ದೆ ಅಡಿ ಕೋರ್ಟ್ನಲ್ಲಿ ಖಾಸಗಿ ದೂರ ಹಾಗೂ ಎಂಟಿಪಿ ಕಾಯ್ದೆ ಅನ್ವಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net