ಮಹಾರಾಷ್ಟ್ರ ಮೂಲದ ಆರೋಪಿ ಬಂಧನ

download
ಎಸ್ಪಿ ಅಮರನಾಥ ರೆಡ್ಡಿ
Published on

ಬಾಗಲಕೋಟೆ: ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿ ಪಾಕೇಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಿಸುವ ಸಿದ್ದತೆಯಲ್ಲಿ ಇದ್ದಾಗ ಪೊಲೀಸರಿಗೆ ಕೈಗೆ ಸಿಕ್ಕುಬಿದ್ದಿದ್ದ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಪ್ರಕರಣಕ್ಕೆ ಸಂಬಂಽಸಿದಂತೆ ಇದೀಗ ಮಹಾರಾಷ್ಟ್ರ ಮೂಲದ ಆರೋಪಿ ಒಬ್ಬನನ್ನು ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಬಂಽಸಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸಾಗರ ಎನ್ನುವ ಆರೋಪಿಯನ್ನು ಬಂಽಸಿದ್ದಾರೆ. ಸೂಳಿಕೇರಿ ಗ್ರಾಮದ ಸಿದ್ದಪ್ಪ ಕಿತ್ತಲಿ ಎನ್ನುವ ವ್ಯಕ್ತಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಲಿನ ಪುಡಿ ಪಾಕೇಟ್ ಖರೀದಿಸಿ, ಅಲ್ಲಿಂದ ಬೇರೆ ಕಡೆಗೆ ಸಾಗಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಸಾಗರನಿಂದ ಮಹಾರಾಷ್ಟ್ರದ ಬೇರೊಬ್ಬ ವ್ಯಕ್ತಿಗೆ ಈ ದಾಸ್ತಾನು ಸಾಗಾಣಾಕೆ ಆಗುತ್ತಿದ್ದು, ಆ ಆರೋಪಿಗಾಗಿಯೂ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?

ಜಿಲ್ಲೆಯ ಬಾದಾಮಿ ತಾಲೂಕಿನ ಸಿದ್ದಪ್ಪ ಕಿತ್ತಲಿ ಎನ್ನುವ ವ್ಯಕ್ತಿ ಶಾಲೆಗಳಿಗೆ ಹಾಲಿನ ಪುಡಿ ಪಾಕೇಟ್ ಪೂರೈಕೆ ಮಾಡಲು ಸಬ್ ಲೀಜ್ ಪಡೆದಿದ್ದ. ಶಾಲೆಗಳಿಂದ ಹಾಲಿನ ಪುಡಿ ಪಾಕೇಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಿಸಲು ಸಿದ್ದತೆಯಲ್ಲಿ ಇದ್ದಾಗ ಅಕ್ಟೋಬರ್ ೪ ರಂದು ರಾತ್ರಿ ಖಚಿತ ಮಾಹಿತಿ ಮೇರಿಗೆ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ ದಾಸ್ತಾನು ವಶಕ್ಕೆ ಪಡೆದು, ಆರೋಪಿಯನ್ನು ಬಂಽಸಿದ್ದರು.

ಒಟ್ಟು ೧೭.೯೦ ಲಕ್ಷ ರೂ. ಮೌಲ್ಯದ ೪.೫ ಟನ್ ಹಾಲಿನ ಪುಡಿ ಪಾಕೇಟ್ ಸಿಕ್ಕಿದ್ದವು. ಆರೋಪಿಯ ಇದನ್ನು ಮಾಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ. ಅಕ್ಕಲಕೋಟೆಯ ಸಾಗರ ಅದನ್ನು ಪಡೆದು, ಬಳಿಕ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ. ಅಲ್ಲಿಂದ ಬೇಕರಿ ಹಾಗೂ ಐಸ್ ಕ್ರಿಮ್ ತಯಾರಿಸಲು ಈ ಶಾಲಾ ಮಕ್ಕಳ ಹಾಲಿನ ಪುಡಿ ಬಳಕೆ ಮಾಡುತ್ತಿದ್ದರು. ಇದೀಗ ಸಾಗರ ಅವರನ್ನು ಬಂಽಸಿದ್ದು, ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾಗಿ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net