

ಕಲಬುರಗಿ: ಕರ್ನಾಟಕ ಸೇನೆಯಿಂದ ನಗರದ ಕನ್ನಡ ಭವನದಲ್ಲಿ ಮೇ ೨೯ರಂದು ಮಧ್ಯಾಹ್ನ ೧೨.೩೦ಕ್ಕೆ ಬುದ್ಧ, ಬಸವ, ಅಂಬೇಡ್ಕರ್, ಮಾದಾರ ಚೆನ್ನಯ್ಯ, ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಗುವುದು ಎಂದು ಸೇನೆ ಗೌರವಾಧ್ಯಕ್ಷ ರಮೇಶ ಬೀದರಕರ್ ತಿಳಿಸಿದರು. ೨೦೨೩-೨೦೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಐದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರದ ಐವರು ಸಾಧಕರಿಗೆ `ಸೇವಾ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಪ್ರಮುಖರಾದ ದತ್ತು ಹೈಯಾಳಕರ್, ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ ಇತರರಿದ್ದರು.