ಮಹಾಗಣಪತಿಗೆ ಮಳೆಯ ಮಜ್ಜನ-ಸುರಿಯುವ ಮಳೆಯ ನಡುವೆ ಮೂರ್ತಿ ವಿಸರ್ಜನೆ

10KWR-7.jpg
Published on

ಕಾರವಾರ: ನಗರದಲ್ಲಿ ಭಾದ್ರಪದ ಚೌತಿ ದಿನ ಪ್ರತಿಷ್ಠಾಪಿಸಿದ್ದ 8 ಗಣಪತಿ ಮೂರ್ತಿಗಳನ್ನು ಶನಿವಾರ ಅದ್ದೂರಿ ಮೆರವಣಿಗೆಯೊಂದಿಗೆ ಕೊಂಡೊಯ್ದು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.
ಮಾರುತಿ ದೇವಸ್ಥಾನ,‌ಸುಭಾಷ್ ಸರ್ಕಲ್, ಕಾಜುಬಾಗ, ಕೋಡಿಬಾಗ, ನಂದನಗದ್ದಾ,‌ಕೆಎಚ್ ಬಿ, ಶಿರವಾಡ ಮುಂತಾದೆಡೆಯ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು. ಟ್ಯಾಗೋರ್ ಕಡಲ ತೀರ, ಅಲಿಗದ್ದಾ, ಕಾಳಿ ರಿವರ್ ಗಾರ್ಡನ್  ಮುಂತಾದೆಡೆ ವಿಸರ್ಜನೆ ಮಾಡಲಾಯಿತು.
ಕಿವಿಗಡಚಿಕ್ಕುವ ಡಿಜೆ ಮ್ಯೂಸಿಕ್ ಗೆ ಸಾವಿರಾರು  ಯುವಕರು ಕುಣಿದು ಕುಪ್ಪಳಿಸಿದರು. ಪಟಾಕಿ, ತಮಟೆ ಶಬ್ದಗಳೂ ಸೇರಿಕೊಂಡವು.
ಮಳೆಯ ಮಜ್ಜನ:
ಆಗಾಗ ಮಳೆ‌ ಸುರಿದರೂ ಗಣಪತಿ ವಿಸರ್ಜನೆ ಮೆರವಣಿಗೆ ಸಂಭ್ರಮಕ್ಕೆ ಅಡ್ಡಿ ಮಾಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net