ಮಸೀದಿಗಳಲ್ಲಿ ನಡೆಯದ ನಮಾಜ್

3sdp2
Published on

ಸಿದ್ದಾಪುರ: ಕರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದ್ದರಿಂದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದೇ ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಶುಕ್ರವಾರ ನಡೆಯಲಿಲ್ಲ. ಕೆಲವು ಮಸೀದಿಗಳ ಎದುರು ಜುಮ್ಮಾ ನಮಾಜ್ ಇರುವುದಿಲ್ಲ ಎಂಬ ನಾಮಫಲಕ ಹಾಕಿ ಗೇಟಿಗೆ ಬೀಗ ಹಾಕಿರುವುದು ಕಂಡುಬಂದಿದೆ. ಆದರೂ ಮುನ್ನೆಚ್ಚರಿಕೆಯಾಗಿ ಸಿಪಿಐ ಪ್ರಕಾಶ ಹಾಗೂ ಪಿಎಸ್​ಐ ಮಂಜುನಾಥ ರ್ಬಾ ಅವರು ಎಲ್ಲ ಮಸೀದಿಗಳಿಗೆ ಪೊಲೀಸರನ್ನು ನಿಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net