ಮಳೆಯಿಂದ ಹಿತ್ಲಳ್ಳಿ ಭಾಗದಲ್ಲಿ ಭಾರಿ ಹಾನಿ

03-ylp-03-male.jpg
Published on

ಯಲ್ಲಾಪುರ:ತಾಲೂಕಿನ ಹಿತ್ಲಳ್ಳಿ ಭಾಗದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

 ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಇಳೆಹಳ್ಳಿ, ಬಾಳೆಹಳ್ಳಿ, ತೋಳಗೋಡ, ಕಲ್ಲೊಡ್ಲು, ಬಾಳಿಗೆಮನೆ ಮುಂತಾದ ಭಾಗಗಳಲ್ಲಿ ರೈತರ ತೋಟ, ಗದ್ದೆಗಳಿಗೆ ಹಾನಿಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದು, ತೋಟ, ಗದ್ದೆಗಳಿಗೆ ಹಳ್ಳದ ನೀರು ನುಗ್ಗಿ ಬೆಳೆ ನಷ್ಟ ಉಂಟಾಗಿದೆ. ಜೋರಾದ ಗಾಳಿಯ ಪರಿಣಾಮ ಅಡಕೆ, ಬಾಳೆ ಗಿಡಗಳು ನೆಲ ಕಚ್ಚಿವೆ.

ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಭಟ್ಟ ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 1.5 ಕೋಟಿ ರೂ ಹಾನಿ ಉಂಟಾಗಿದೆ. ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net