ಮಳೆಗೆ ಮನೆ ಮೇಲ್ಛಾವಣಿ ಕುಸಿತ

11ankola1b
Published on

ಅಂಕೋಲಾ: ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೋಮವಾರ ರಾತ್ರಿ ತಾಲೂಕಿನ ವಿವಿಧ ಭಾಗಗಳಲ್ಲಿ ಮನೆ ಗೋಡೆ ಹಾಗೂ ಇತರ ಉಪಕರಣಗಳು ಹಾಳಾಗಿವೆ. ಗಂಗಾವಳಿ ನೆರೆ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.

ತಾಲೂಕಿನ ಬಾಳೆಗುಳಿಯ ಖುರ್ಷಿದಾ ಅಬ್ದುಲ್ ಕರೀಂ ಎಂಬುವರ ಮನೆಯ ಗೋಡೆ ಕುಸಿದಿದೆ. ತಹಸೀಲ್ದಾರ್ ಉದಯ ಕುಂಬಾರ, ಗ್ರಾಮ ಲೆಕ್ಕಾಧಿಕಾರಿ ಭಾರ್ಗವ ನಾಯಕ, ಇತರರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಹಾಗೆಯೇ ವಂದಿಗೆ ಗ್ರಾ.ಪಂ. ವ್ಯಾಪ್ತಿಯ ಜಮಗೋಡದ ಬೊಳೆಯ ಆಗೇರ ಕಾಲನಿಯಲ್ಲಿ ಪಾರ್ವತಿ ಶಂಕರ ಹನೇಹಳ್ಳಿ ಅವರ ಮನೆ ನೆಲಸಮವಾಗಿದೆ. ಗ್ರಾಮ ಲೆಕ್ಕಾಧಿಕಾರಿ ನಾಗರತ್ನ ನಾಯ್ಕ, ಗ್ರಾಮ ಸೇವಕ ಬಾಬು ಆಗೇರ, ಪಿಡಿಒ ರವೀಂದ್ರ ಬಾಬು, ಕಾರ್ಯದರ್ಶಿ ವಸಂತ ಮಹಾದೇವ ನಾಯ್ಕ ಇತರರು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net