

ಕುಮಟಾ: ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಘನಾಶಿನಿ ನದಿಯಲ್ಲಿ ಕಳೆದ ವರ್ಷ ಉಂಟಾದ ಪ್ರವಾಹಕ್ಕೆ ತೂಗುಸೇತುವೆ ಕೊಚ್ಚಿಹೋಗಿತ್ತು. ಈಗ ಕಾಂಕ್ರೀಟ್ ಸೇತುವೆ ನಿರ್ವಿುಸಲಾಗುತ್ತಿದ್ದು, ಎಷ್ಟೇ ದೊಡ್ಡ ಪ್ರವಾಹ ಬಂದರೂ ಜನ ನಿರ್ಭಯವಾಗಿ ನದಿ ದಾಟುವುದು ಸಾಧ್ಯವಾಗಲಿದೆ.
ಸೊಪ್ಪಿನಹೊಸಳ್ಳಿ ಹಾಗೂ ಸಂತೇಗುಳಿ ಪಂಚಾಯಿತಿ ವ್ಯಾಪ್ತಿಯ ಕಲವೆ, ಬಂಗಣೆ, ಮೊರಸೆ ಇನ್ನಿತರ 10ಕ್ಕೂ ಹೆಚ್ಚು ಅರಣ್ಯ ಗ್ರಾಮಗಳಿಗೆ ಮಲೆನಾಡ ಅಭಿವೃದ್ಧಿ ನಿಗಮದಿಂದ 5 ವರ್ಷದ ಹಿಂದೆ ನಿರ್ವಿುಸಿದ್ದ ತೂಗು ಸೇತುವೆಯೇ ಸಂಪರ್ಕದ ಏಕೈಕ ಕೊಂಡಿಯಾಗಿತ್ತು. ಆದರೆ, ಅಘನಾಶಿನಿ ನದಿಗೆ ಹಾಕಲಾದ ತೂಗು ಸೇತುವೆ ಕೊಚ್ಚಿ ಹೋಗಿದ್ದರಿಂದ ಜನತೆ ಅಕ್ಷರಶಃ ದ್ವೀಪ ವಾಸಿಗಳಂತಾಗಿದ್ದರು. ವಾರಗಟ್ಟಲೆ ಜನ ಹೊರಜಗತ್ತಿನ ಸಂಪರ್ಕವಿಲ್ಲದೇ ಪರದಾಡುವಂತಾಗಿತ್ತು. ಬಳಿಕ ಪ್ರವಾಹ ಇಳಿದ ಬೆನ್ನಲ್ಲೇ ಜನರೆ ಹಳ್ಳದೊಳಗೆ ಕಲ್ಲಿನ ಕಣಜ ಮಾಡಿ ಮರದ ದಿಮ್ಮಿ ಬಳಸಿ ನದಿಯಂಚಿನ ಮರದಿಂದ ಮರಕ್ಕೆ ತಾತ್ಕಾಲಿಕ ಕಾಲು ಸಂಕಗಳನ್ನು ಮಾಡಿಕೊಂಡು ತುರ್ತು ಓಡಾಟಕ್ಕೆ ಅನುಕೂಲ ಮಾಡಿಕೊಂಡಿದ್ದರು. ಈ ಕಾರ್ಯಕ್ಕೆ ತಾಲೂಕಾಡಳಿತ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಕಾರ ನೀಡಿದ್ದವು.
ಈ ವರ್ಷದ ಮಳೆಗಾಲದೊಳಗೆ ಸೇತುವೆಯ ಅನುಕೂಲ ಕಲ್ಪಿಸಬೇಕಾದ ಸವಾಲಿನೊಂದಿಗೆ ಕಾರ್ಯಪ್ರವೃತ್ತರಾದ ಶಾಸಕ ದಿನಕರ ಶೆಟ್ಟಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 2. 25 ಕೋಟಿ ರೂ. ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸಿದ್ದರು. ಆದರೆ, ಲಾಕ್ಡೌನ್ನಿಂದ ಕೆಲಸ ಸ್ಥಗಿತವಾಗಿತ್ತು. ಪುನಃ ಜಿಲ್ಲಾಡಳಿತದಿಂದ ವಿಶೇಷ ಅನುಮತಿ ಪಡೆದು ಕಾಮಗಾರಿ ಮುಂದುವರೆಸಿ ಶತಾಯಗತಾಯ ಮಳೆಗಾಲ ಆರಂಭದೊಳಗೆ ಸೇತುವೆ ಪೂರ್ಣಗೊಳಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.
ಶಾಸಕ ದಿನಕರ ಶೆಟ್ಟಿ ಭಾನುವಾರ ಸೇತುವೆಯ ಕಾಮಗಾರಿ ವೀಕ್ಷಿಸಿದರು. ಸಂತೇಗುಳಿ ಪಂಚಾಯಿತಿ ಸದಸ್ಯ ವಿನಾಯಕ ಭಟ್ಟ, ವಿಷ್ಣು ಭಟ್ಟ ಕೋಣಾರೆ, ಗುತ್ತಿಗೆದಾರ ಗಜಾನನ ಜೆ. ನಾಯ್ಕ ಇದ್ದರು.
ಸುಮಾರು 100 ಅಡಿ ಉದ್ದ , 30 ಅಡಿ ಅಗಲಕ್ಕೆ ಮೂರು ಕಂಬಗಳ ಮೇಲೆ ಸೇತುವೆ ನಿರ್ವಿುಸಲಾಗುತ್ತಿದ್ದು, ಮೇ ಅಂತ್ಯದೊಳಗೆ ಎರಡು ಕಂಬಗಳಿಗೆ ಸ್ಲಾ ್ಯ್ ಕೆಲಸ ಮುಗಿಯಲಿದೆ. ಮಳೆಯ ಸಮಸ್ಯೆ ಇಲ್ಲದಿದ್ದರೆ ಪೂರ್ಣ ಸ್ಲಾ ್ಯ್ ಹಾಕಬಹುದಾಗಿದೆ. ಮಳೆ ಮೊದಲೇ ಆರಂಭವಾದರೂ ಕೂಡ ಸೇತುವೆಯ ಮೇಲೆ ಜನರು ಹಾಗೂ ದ್ವಿಚಕ್ರ ವಾಹನಗಳ ಓಡಾಡುವುದಕ್ಕೆ ಅನುಕೂಲ ಮಾಡಿಕೊಡುತ್ತೇವೆ.| ರಾಜು ಶಾನಭಾಗ, ಪಿಡಬ್ಲು ್ಯ ಇಂಜಿನಿಯರ್