ಮಳೆ ರಾಜೇಂದ್ರಸ್ವಾಮಿ ಮಹಾರಥೋತ್ಸವ

bkt-18-8
Published on

ಬಾಗಲಕೋಟೆ: ಜಲತತ್ವಸಿದ್ದಾಂತವನ್ನು ಪ್ರತಿಪಾದನೆಯ, ಜಲವನ್ನು ಪೂಜಿಸುವ ಮಳೆ ಆರಾಧನೆಯ ಮಠದ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾವರ ಅದ್ದೂರಿಯಾಗಿ ಸಹಸ್ರಾರು ಭಕ್ತರ ಮದ್ಯ ಮಹಾರಥೋತ್ಸವ ಸೋಮವಾರ ಹೋಸ ಮುರನಾಳ ಗ್ರಾಮದಲ್ಲಿ ಜರುಗಿತು.

ಶ್ರೀ ಮಳೆರಾಜೇಂದ್ರಸ್ವಾಮಿಯ ಮೂರ್ತಿಗೆ ಅಭಿಷೇಕ ಮಹಾಮಂಗಳಾರುತಿ, ಭಗವತದ್ಗೀತಾ ಪಾರಾಯಣ ನಡೆಯಿತು. ವಿಶೇಷ ಪುಷ್ಪಾಲಂಕಾರದೊಂದಿಗೆ ವಿಷೇಶ ಪೂಜೆಗಳನ್ನು ಸಲ್ಲಿಸಲಾಯಿತು, ಹರಕೆಯೊತ್ತ ಅನೇಕಭಕ್ತಾದಿಗಳು ಡಿರ್ಗದಂಡ ನಮಸ್ಕಾರಗಳನ್ನು ಹಾಕಿ ತಮ್ಮ ಹರಕೆ ತಿರಿಸಿಕೊಂಡರು, ಮದ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೋಂದಿಗೆ ಶ್ರೀ ಸ್ವಾಮಿಯ ಮೂರ್ತಿಯೊತ್ತ ಪಲ್ಲಕ್ಕಿ, ನಂದಿಕೋಲು ಪುರವಂತರ ಸೇವೇಯೋಂದಿಗೆ ಭಾಜಾ ಭಜಂತ್ರಿ ಕರಡಿಮಜಲು ಸೇರಿಂದತೆ ಉತ್ಸವ {ಸಣ್ಣ ತೇರುಉಚ್ಚಯ್ಯ} ಜರುಗಿತು.

ಆರತಿ ಸೇವೆಯಲ್ಲಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಘೋಂಡಿದ್ದರು, ಮುಸ್ಲಿಂ ಮಹಿಳೆಯರು ದೀಪದಾರತಿಗಳಿಗೆ ಏಣ್ಣೆ ನಿಡಿ ತಮ್ಮ ಸೇವೆಯನ್ನ ಮಾಡಿದರು. ಸಂಜೆ ಸಹಸ್ರಾರು ಜನರ ಮದ್ಯ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿಯ ಮಹಾರಥೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net