ಮಳವಳ್ಳಿ ವಿವಿಧೆಡೆ ಪ್ರಚಾರ ರಥ ಸಂಚಾರ

16 mlv 5
Published on

ಮಳವಳ್ಳಿ: ಸುತ್ತೂರು ಶ್ರೀಕ್ಷೇತ್ರದಲ್ಲಿ 2025ರ ಜ.26ರಿಂದ 31ರವರೆಗೆ ನಡೆಯುವ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರುದಿನಗಳ ಕಾಲ ಪ್ರಚಾರ ರಥ ಸಂಚರಿಸಿತು.

ಡಿ.14ರಂದು ತಾಲೂಕಿನ ಚಿಕ್ಕಬಾಗಿಲು ಗ್ರಾಮಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ತಾಲೂಕು ವೀರಶೈವ ಮಹಾಸಭಾ ಹಾಗೂ ಗ್ರಾಮದ ಮುಖಂಡರಿಂದ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು. ರಾಗಿಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀಪ್ರಭುಲಿಂಗಸ್ವಾಮೀಜಿ, ಮಹಾಸಭಾ ತಾಲೂಕು ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ಸುರೇಶ್, ಪದ್ಮಾ ಮಹೇಶ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್, ತಾಲೂಕು ಯುವ ಬಳಗದ ಅಧ್ಯಕ್ಷ ಎಚ್.ಸಿ.ಮಹೇಶ್, ಗ್ರಾಮದ ಮುಖಂಡರಾದ ನಟರಾಜು, ಗಿರೀಶ್, ಮಹದೇವಸ್ವಾಮಿ ಇದ್ದರು.

ನಂತಂರ ಪೂರಿಗಾಲಿ, ನೆಲ್ಲಿಗೆರೆ, ಅವ್ವೇರಹಳ್ಳಿ, ಕಿರುಗಾಲು, ಚಿಕ್ಕಮುಲಗೂಡು, ಸಂಶೆಟ್ಟಿಪುರ, ಕನ್ನಳ್ಳಿ ಹಾಗೂ ಮಳವಳ್ಳಿ ಪಟ್ಟಣದಲ್ಲಿ ಸಂಚರಿಸಿ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಯಿತು. ಡಿ.15 ರಂದು ಕುಂದೂರು, ತೆಂಕಹಳ್ಳಿ, ನಾರಾಯಣಪುರ, ಮುಟ್ಟನಹಳ್ಳಿ, ಸರಗೂರು, ಬಿ.ಜಿ.ಪುರ, ಕಗ್ಗಲೀಪುರ, ಬೆಳಕವಾಡಿ, ಹೊಸಹಳ್ಳಿ, ಪಂಡಿತಹಳ್ಳಿ, ಬಾಚನಹಳ್ಳಿ, ಹೆಬ್ಬಣಿ, ಗೌಡಗೆರೆ ಮಾರ್ಗವಾಗಿ ಸಂಚರಿಸಿ ಡಿ.ಹಲಸಹಳ್ಳಿ ಗವಿಮಠದಲ್ಲಿ ವಾಸ್ತವ್ಯ ಹೂಡಲಾಯಿತು. ಡಿ.16 ಹಾಡ್ಲಿ, ನಂಜೇಗೌಡನದೊಡ್ಡಿ , ಹಲಗೂರಿನಲ್ಲಿ ಕನಕಪುರ ತಾಲೂಕಿಗೆ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net