ಮಳಖೇಡದಲ್ಲಿ ಶ್ರೀನಿವಾಸ ದೇವರಿಗೆವಿಶೇಷ ಪುಷ್ಪಾರ್ಚನೆ 15, 16ರಂದು

IMG-20230812-WA0047
Published on


ಕಲಬುರಗಿ: ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ತಟದಲ್ಲಿರುವ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ತಿರುಮಲ ತಿರುಪತಿ ದೇವಸ್ಥಾನ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಡಿ ಆ.೧೫, ೧೬ರಂದು ಶ್ರೀ ಶ್ರೀನಿವಾಸ ದೇವರಿಗೆ ವಿಶೇಷ ಪುಷ್ಪಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಜೆಕ್ಟ್ ಸಂಚಾಲಕ ಪಂ.ಶ್ರೀನಿವಾಸಾಚಾರ್ಯ ಪದಕಿ ತಿಳಿಸಿದ್ದಾರೆ. ೧೫ರಂದು ಸಂಜೆ ಮಳಖೇಡದ ಪ್ರಮುಖ ಬೀದಿಗಳಲ್ಲಿ ಶ್ರೀ ಭೂಸಮೇತ ಶ್ರೀನಿವಾಸ ದೇವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ೧೬ರಂದು ಬೆಳಗ್ಗೆ ಸುಪ್ರಭಾತ, ಶ್ರೀ ಶ್ರೀನಿವಾಸ ದೇವರು ಹಾಗೂ ಶ್ರೀ ಜಯತೀರ್ಥರ ಮೂಲ ವೃಂದಾವನಕ್ಕೆ ನಾಮ ಸಂಕೀರ್ತನೆ ಮೂಲಕ ಪ್ರದಕ್ಷಿಣೆ, ನಮಸ್ಕಾರ, ಗೋ ಪ್ರದಕ್ಷಿಣೆ, ಭಜನೆ ಬಳಿಕ ಅಪಾರ ಭಕ್ತರ ಮಧ್ಯೆ ಶ್ರೀನಿವಾಸ ದೇವರಿಗೆ ವಿಶೇಷ ಪುಷ್ಪಾರ್ಚನೆ ನೆರವೇರಲಿದೆ. ಪಂಡಿತರು ಪ್ರವಚನ ನೀಡುವರು. ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿ ಪಂ.ಆನAದತೀರ್ಥಾಚಾರ್ಯ ಪಗಡಾಲ ನೇತೃತ್ವದ ಕಾರ್ಯಕ್ರಮದಲ್ಲಿ ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ.ವೆAಕಣ್ಣಾಚಾರ್ಯ ಪೂಜಾರ್ ಇತರರು ಭಾಗವಹಿಸುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀನಿವಾಸ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ಪುಷ್ಪಾರ್ಚನೆ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net