ಮಲ್ಲಿಕಾರ್ಜುನ ಚರಂತಿಮಠಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಗೆಲವು

bkt-1-7
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಲ್ಲಿ ಮುಳಗಡೆಯಾಗಿದ್ದ ಚರಂತಿಮಠ ಆಯಿಲ್ ಮೀಲ್ ಗೆ ಒಂದು ಎಕರೇ ಮೂವತ್ತ ಮೂರು ಗುಂಟೆ (1:33) ಜಮೀನು ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿದೆ, ತನ್ಮೂಲಕ ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಜಯ ಸಿಕ್ಕಿದೆ.

ಮುಳಗಡೆಯಾಗಿದ್ದ ಆಯಲ್ ಮೀಲಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಆಡಳಿತ ಮಂಡಳಿಯು ಜಮೀನು ನೀಡಲು ನಿರಾಕರಿಸಿತ್ತು. ಮೀಲ್ ಮಾಲೀಕರಾದ ಮಲ್ಲಿಕಾರ್ಜುನ ಚರಂತಿಮಠ ಹೈಕೋರ್ಟ್ ಮೊರೆ ಹೋಗಿದ್ದರು.

ವಾದ- ವಿವಾದ ಆಲಿಸಿದ್ದ ಹೈಕೋರ್ಟ್ ಚರಂತಿಮಠ ಆಯಿಲ್ ಮೀಲ್ ಗೆ ಒಂದು ಎಕರೆ ಮೂವತ್ತು ಮೂರು ಗುಂಟೆ ಜಮೀನು ನೀಡಬೇಕು ಅಂತ ತೀರ್ಪು ನೀಡಿ ಅಂದಿನ ಆಡಳಿತ ಮಂಡಳಿಗೆ ಆದೇಶಿಸಿತ್ತು ,ಆದರು ಸಹ ಬಿಟಿಡಿಎ ಆಡಳಿತ ಮಂಡಳಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ ಚರಂತಿಮಠ ಅವರು ತಮಗೆ ಸೀಗಬೇಕಾದ ಆಸ್ತಿ ಹಕ್ಕುಗಳ ಬಗ್ಗೆ ನ್ಯಾಯಾಲಯಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು.ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪುನ್ನು ಎತ್ತಿ ಹಿಡಿದು ಒಂದು ಎಕರೇ ಮೂವತ್ತು ಮೂರು ಗುಂಟೆ ಜಮೀನು 90 ದಿನಗಳ ಒಳಗಾಗಿ ಮಂಜೂರು ಮಾಡುವಂತೆ ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಗುವುದು ಎಂದು ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net