ಮಲಪ್ರಭ ನದಿಗೆ ಬಿದ್ದ ಕ್ಯಾಂಟರ್

5010
Published on

ಎಂ.ಕೆ.ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಮಲಪ್ರಭ ನದಿಯಲ್ಲಿ ಕ್ಯಾಂಟರ್ ವಾಹನ ಬಿದ್ದಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಚಾಲಕ ರಾಮದಾಸ ಗೋಡೆ (43) ಗಾಯಗೊಂಡಿದ್ದಾನೆ.

50 ಅಡಿ ಮೇಲಿಂದ ಬಿದ್ದ ಕ್ಯಾಂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಿಕ್ಕಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಕಟ್ಟಿಗೆ ರೀಪ್ (ಪಟ್ಟಿ) ಹೊತ್ತು ಸಾಗುತ್ತಿತ್ತು. ಬ್ಯಾರೇಜ್ ನಿರ್ಮಾಣ ಕಾರ್ಮಿಕರು ಸ್ಥಳಕ್ಕಾಗಮಿಸಿ ಚಾಲಕನನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net