ಮರಿಗೆ ಜನ್ಮ ನೀಡಿದ ಕಾಡಾನೆ

23 ylp 06
Published on

ಯಲ್ಲಾಪುರ: ತಾಲೂಕಿನ ಮಂಚಿಕೇರಿ ಸಮೀಪದ ಬೊಮ್ಮನಹಳ್ಳಿ ಬಳಿಯ ಅರಣ್ಯದಲ್ಲಿ ಬುಧವಾರ ಕಾಡಾನೆಯೊಂದು ಮರಿಗೆ ಜನ್ಮ ನೀಡಿದೆ. ಕೆಲ ದಿವಸಗಳಿಂದ ಆ ಭಾಗದಲ್ಲೇ ಸಂಚರಿಸುತ್ತಿರುವ ಆನೆಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ಆ ಗುಂಪಿನ ಆನೆಯೊಂದು ಬೊಮ್ಮನಹಳ್ಳಿ ಬಳಿ ಮರಿಗೆ ಜನ್ಮ ನೀಡಿದೆ. ಗುಂಪಿನ ಆನೆಗಳೆಲ್ಲ ಮರಿಗೆ ಜನ್ಮ ನೀಡಿದ ಆನೆಯ ಸುತ್ತವೇ ಬೀಡುಬಿಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net